ಸುಳ್ಯ: ವಿದ್ಯುತ್ ಗುತ್ತಿಗೆದಾರರ ಸಂಘ ಸುಳ್ಯ.,ಪುತ್ತೂರು, ಬೆಳ್ತಂಗಡಿ ಹಾಗೂ ಕಡಬದ ಗುತ್ತಿಗೆದಾರ ಸದಸ್ಯರು ಜೊತೆಗೂಡಿ ಶಾಸಕರಾದ ಅಶೋಕ್ ರೈ ಹಾಗೂ ಭಾಗೀರಥಿ ಮುರುಳ್ಯ ಅವರ ಮೂಲಕ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಬ್ರೇಕ್ ಡೌನ್ ಕಾಮಗಾರಿಗಳ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಮನವರಿಕೆ ಮಾಡಲಾಯಿತು. ಈ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ ಮುಂದಿನ ಕ್ರಮ ಕೈ ಗೊಳ್ಳಲು ಅದೇಶಿಸುವುದಾಗಿ ತಿಳಿಸಿರುತ್ತಾರೆ.ವಿದ್ಯುತ್ ಗುತ್ತಿಗೆದಾರರು ನಿರ್ವಹಿಸುವ
ತುರ್ತು ಸೇವೆಗಳಲ್ಲಿ ಒಂದಾದ ಬ್ರೇಕ್ ಡೌನ್ ಕಾಮಗಾರಿಗಳನ್ನು ತ್ವರಿತ ರೀತಿಯಲ್ಲಿ ವಿದ್ಯುತ್ ಇಲಾಖೆ ಹಾಗೂ ವಿದ್ಯುತ್ ಗುತ್ತಿಗೆದಾರರು ಜೊತೆಗೂಡಿ ಗ್ರಾಹಕರಿಗೆ ತೊಂದರೆಯಾಗದಂತೆ ಕಾಮಗಾರಿಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.ಇವರಿಗೆ ಭತ್ಯೆ ನೀಡುವಂತೆ ಇಂಧನಸಚಿವ ಕೆಜೆ ಜಾರ್ಜ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ. ಆದರೆ ಇವರಿಗೆ ಈ ಹಿಂದೆ ನೀಡುತ್ತಿದ್ದ 45% ಪ್ರಾದೇಶಿಕ ಭತ್ಯೆ, 25% ಬ್ರೇಕ್ ಡೌನ್ ಭತ್ಯೆ, ಸಾಗಾಣಿಕೆ ವೆಚ್ಚ ಹಾಗೂ ಇ ಎಸ್ ಐ / ಪಿ ಎಫ್ ಭತ್ಯೆಗಳ ಬದಲಾಗಿ ಈಗ ಕೇವಲ ದರಪಟ್ಟೆಯ ಮೊತ್ತದ ಮೇಲೆ 12% ಗಳ ಭತ್ಯೆ ನೀಡುತ್ತಿದ್ದು. ಇದರಿಂದ ನಮ್ಮ ಮಲೆನಾಡು ಹಾಗೂ

ಕರಾವಳಿ ಭೂ ಭಾಗಗಳಾದ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕು ಸೇರಿದಂತೆ ಹಲವು ಮಲೆನಾಡು ಭಾಗಗಳಲ್ಲಿ ವಿದ್ಯುತ್ ಬ್ರೇಕ್ ಡೌನ್ ಕಾಮಗಾರಿಗಳನ್ನು ನಿರ್ವಹಿಸಲು ಕಷ್ಟ ಸಾಧ್ಯವಾಗಿದೆ. ಬ್ರೇಕ್ ಡೌನ್ ಕಾಮಗಾರಿಗಳಿಗೆ ಈ ಹಿಂದೆ ನೀಡುತ್ತಿದ್ದ 45% ಪ್ರಾದೇಶಿಕ ಭತ್ಯೆ, 25% ಬ್ರೇಕ್ ಡೌನ್ ಭತ್ಯೆ, ಸಾಗಾಣಿಕಾ ವೆಚ್ಚ ಹಾಗೂ ಇ ಎಸ್ ಐ ಪಿ ಎಫ್ ಭತ್ಯೆಗಳನ್ನು ಈ ಹಿಂದಿನಂತೆಯೇ ನೀಡಿ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಪೈಕ, ಬೆಂಗಳೂರಿಗೆ ತೆರಳಿದ ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಪೈಕ, ಜಿಲ್ಲಾ ಕಾರ್ಯಕಾರಿ ಸಮಿತಿಯ ಮಾಯಿಲಪ್ಪ ಸಂಕೇಶ, ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಕೇಪಳಕಜೆ, ಖಜಾಂಜಿ ಮಧುಕಿರಣ್ , ಸತ್ಯ ನಾರಾಯಣ, ಶ್ರೀಧರ ಕೆ.ಎಸ್ ಉಪಸ್ಥಿತರಿದ್ದರು.









