ಗುತ್ತಿಗಾರು: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮೇ.4ರಂದು ಗುತ್ತಿಗಾರು ಭಾಗದಲ್ಲಿ ಚುನವಣಾ ಪ್ರಚಾರ ನಡೆಸಿದ್ದಾರೆ. ಗುತ್ತಿಗಾರು ಶಕ್ತಿ ಕೇಂದ್ರದ ಬಳ್ಳಕ್ಕದಿಂದ ಪ್ರಚಾರ ಕಾರ್ಯ ಆರಂಭಿಸಿದರು. ಗಡಿಕಲ್ಲು,ಅಚಳ್ಳಿ,ಮುಳಿಯ, ಮತ್ತಿತರ ಭಾಗದಲ್ಲಿ ಪ್ರಚಾರ ನಡೆಸಿದರು. ಗುತ್ತಿಗಾರು, ಮಡಪ್ಪಾಡಿ ಭಾಗದಲ್ಲಿ ಇಂದು ಬಿಜೆಪಿ ಪ್ರಚಾರ ಕಾರ್ಯ ನಡೆಯುತಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಜೊತೆಯಲ್ಲಿದ್ದರು.