ಸುಳ್ಯ:ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಬಿಜೆಪಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಏ.21ರಂದು ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಸುಳ್ಯ ಮಂಡಲದ 233 ಬೂತ್ಗಳಲ್ಲಿಯೂ ಮಹಾ ಸಂಪರ್ಕ ಅಭಿಯಾನ ನಡೆಯಿತು. ಕ್ಷೇತ್ರದ ಎಲ್ಲಾ
ಮನೆಗಳನ್ನೂ ಒಂದೇ ದಿನ ಸಂಪರ್ಕಿಸುವ ಮಹಾ ಸಂಪರ್ಕ ಅಭಿಯಾನ ನಡೆಯಿತು. ಮುಖಂಡರುಗಳು ಅವರವರ ಬೂತ್ನಲ್ಲಿ ಪ್ರಚಾರ ನಡೆಸಿದರು. ಶಾಸಕಿ ಭಾಗೀರಥಿ ಮುರುಳ್ಯ ತಮ್ಮ ಬೂತ್ನಲ್ಲಿ ಹಾಗೂ ಇತರ ಬೂತ್ಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಬೂತ್ನಲ್ಲಿ, ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ ಐವರ್ನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ವಿವಿಧ ನಾಯಕರು ತಮ್ಮ ಬೂತ್ಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು.