ಸುಳ್ಯ:ರಾಜ್ಯದಲ್ಲಿ ರೈತರ ಭೂಮಿಗಳು ವಕ್ಫ್ ಆಸ್ತಿಯಾಗಿ ಮಾರ್ಪಾಡಾಗುತಿದೆ, ಇದರಿಂದ ರಾಜ್ಯದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ರೈತರೇ ಈ ರಾಜ್ಯದ ಅನ್ನದಾತರು. ಸಿದ್ಧರಾಮಯ್ಯ ಸರಕಾರದ ಕ್ರಮದಿಂದ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು
ಹೇಳಿದರು. ರೈತರ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಮಾಡುವ ಹುನ್ನಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವರ್ಯತೆ ಉಂಟಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಕಾಂಗ್ರೆಸ್ ಸರಕಾರ
ಜನರನ್ನು ಬೀದಿಗೆ ತಳ್ಳುವ ಗ್ಯಾರಂಟಿಯನ್ನು ಕೊಡುತಿದೆ ಎಂದು ಹೇಳಿದರು. ಈ ಸರಕಾರ ಬಂದ ಮೇಲೆ ಜನರ ನೆಮ್ಮದಿ ಹಾಳಾಗಿದೆ. ಪ್ರತಿ ದಿನ ಪ್ರತಿಭಟನೆ ಮಾಡುವ ಸ್ಥಿತಿ ನಿರ್ಮಾಣ ಆಗಿದೆ. ಅಭಿವೃದ್ಧಿಗೆ ಯಾವುದೇ ಅನುದಾನ ಬಾರದೆ ಜನರು ಬವಣೆ ಪಡುವಂತಾಗಿದೆ ಎಂದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ
ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಸುಳ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ. ಮಾತನಾಡಿದರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಬಿಜೆಪಿ ಮುಖಂಡರಾದ
ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಸುರೇಶ್ ಕಣೆಮರಡ್ಕ, ವಿನಯ ಕುಮಾರ್ ಮುಳುಗಾಡು, ಶ್ರೀನಾಥ್ ಬಾಳಿಲ, ಜಯಪ್ರಕಾಶ್ ಕುಂಚಡ್ಕ, ನಾರಾಯಣ ಶಾಂತಿನಗರ, ಶಂಕರ ಪೇರಾಜೆ, ಶ್ರೀಕಾಂತ್ ಮಾವಿನಕಟ್ಟೆ, ಪ್ರದೀಪ್ ಕೊಲ್ಲರಮೂಲೆ, ಗುಣವತಿ ಕೊಲ್ಲಂತ್ತಡ್ಕ,
ಪುಷ್ಪಾ ಮೇದಪ್ಪ, ಭಾರತಿ ಉಳುವಾರು, ಸರೋಜಿನಿ ಪೆಲ್ತಡ್ಕ, ಸುನಿಲ್ ಕೇರ್ಪಳ, ದಯಾನಂದ ಕೇರ್ಪಳ, ಶಂಕರ ಪೆರಾಜೆ, ಶಿವಾನಂದ ಕುಕ್ಕುಂಬಳ, ಚನಿಯ ಕಲ್ತಡ್ಕ, ಜಯರಾಜ್ ಕುಕ್ಕೇಟ್ಟಿ,ರಾಕೇಶ್ ಮೆಟ್ಟಿನಡ್ಕ, ಪ್ರಬೋದ್ ಶೆಟ್ಟಿ ಮೇನಾಲ, ಹರೀಶ್ ಬೂಡುಪನ್ನೆ, ಅಶೋಕ್ ಅಡ್ಕಾರ್, ಕಿರಣ್ ಕುರುಂಜಿ, ರಮೇಶ್ ಇರಂತಮಜಲು, ನಯನ್ ರೈ, ಸುಧಾಕರ ಕುರುಂಜಿಗುಡ್ಡೆ, ಲೋಕೇಶ್ ಕೆರೆಮೂಲೆ, ಜಿನ್ನಪ್ಪ ಪೂಜಾರಿ, ಶಿವರಾಮ ಕೇರ್ಪಳ, ಶಿವನಾಥ್ ರಾವ್, ದೇವರಾಜ್ ಕುದ್ಪಾಜೆ, ಶೀನಪ್ಪ ಬಯಂಬು, ಅವಿನಾಶ್ ಕುರುಂಜಿ, ಜಿ.ಜಿ.ನಾಯಕ್, ವಿಕ್ರಮ ಅಡ್ಪಂಗಾಯ, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಠ್, ಕೇಶವ ಮಾಸ್ತರ್ ಹೊಸಗದ್ದೆ, ಶ್ಯಾಮ್ ಪಾನತ್ತಿಲ, ರಾಜೇಶ್ ಮೇನಾಲ, ಮಹೇಶ್ ಕುಮಾರ್ ಮೇನಾಲ, ಪ್ರಸಾದ್ ಕಾಟೂರು, ಚಂದ್ರಶೇಖರ ಪನ್ನೆ, ಗುರುಸ್ವಾಮಿ, ವಿಜಯ ಆಲಡ್ಕ, ನಿಕೇಶ್ ಉಬರಡ್ಕ, ಶಾಂತರಾಮ ಕಣಿಲೆಗುಂಡಿ, ಚಂದ್ರಶೇಖರ ಕೇರ್ಪಳ, ಸೋಮನಾಥ ಪೂಜಾರಿ, ದೀಪಕ್ ಕುತ್ತಮೊಟ್ಟೆ, ಗೋವಿಂದ ಅಳವುಪಾರೆ, ಕೃಷ್ಣಯ್ಯ ಮೂಲೆತೋಟ, ಹೇಮಂತ ಮಠ, ಮಹೇಶ್ ಮೇರ್ಕಜೆ, ಪವಿತ್ರ ಕುರುಂಜಿ, ಸೋಮಶೇಖರ ಪೈಕ,
ಚಂದ್ರಶೇಖರ ನಡುಮನೆ, ಅನೂಪ್ ಬಿಳಿಮಲೆ, ಸತೀಶ್ ಟಿ.ಎನ್, ರಂಜಿತ್ ಕುಮಾರ್, ಅಬ್ದುಲ್ ಕುಂಞಿ ನೇಲ್ಯಡ್ಕ
ಚಂದ್ರಜಿತ್ ಮಾವಂಜಿ ನವೀನ್ ಎಲಿಮಲೆ, ವರ್ಷಿತ್ ಚೊಕ್ಕಾಡಿ, ಸೀತಾನಂದ ಬೇರ್ಪಡ್ಕ, ರಾಕೇಶ್ ಕಿರಿಭಾಗ, ಹರಿಪ್ರಸಾದ್ ಎಲಿಮಲೆ, ರೂಪೇಶ್ ಪೂಜಾರಿಮನೆ, ದಿವ್ಯ ಮಡಪ್ಪಾಡಿ, ಕುಶ ದುಗಲಡ್ಕ, ಕಿಶನ್ ಜಬಳೆ, ಜನಾರ್ಧನ ಬರೆಮೇಲು, ಸುದರ್ಶನ ಪಾತಿಕಲ್ಲು, ಭಾನುಪ್ರಕಾಶ್ ಪೆರುಮುಂಡ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.