ಸುಳ್ಯ:ರಾಜ್ಯ ಸರಕಾರ ಭ್ರಷ್ಟಾಚಾರ, ಕಮೀಷನ್ ದಂಧೆಯಲ್ಲಿ ಮುಳುಗಿದೆ, ಸರಕಾರ ಜನವಿರೋಧಿ ನಿಲುವನ್ನು ತಳೆದಿದೆ ಎಂದು ಆರೋಪಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಲವು ಜನಪರ ಯೊಜನೆಗಳನ್ನು
ರದ್ದುಪಡಿಸಿರುವ ಕಾಂಗ್ರೆಸ್ ಸರಕಾರ ರಾಜ್ಯದ ಅಭಿವೃದ್ಧಿ ಯನ್ನು ಕಡೆಗಣಿಸಿದೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತಿದೆ. ಅದರೆ ರಾಜ್ಯ ಸರಕಾರ ಭ್ರಷ್ಟಾಚಾರ, ಕಮೀಷನ್ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿದೆ. ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್ ಸೆಂಟರ್ ಆಗಿದೆ ಎಂದರು. ರಾಜ್ಯ ಬರಕ್ಕೆ ತುತ್ತಾಗಿದೆ. ರೈತರಿಗೆ ಪರಿಹಾರ ನೀಡಿಲ್ಲ, ವಿದ್ಯುತ್ ಕಡಿತ ತೀವ್ರಗೊಂಡಿದೆ. ವರ್ಗಾವಣೆ ದಂಧೆ ವಿಪರೀತವಾಗಿದೆ ಎಂದು ಆರೋಪಿಸಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ” ಬಿಜೆಪಿ ಸರಕಾರ ಇರುವಾಗ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ಬರುತ್ತಿತ್ತು. ಆದರೆ ಕಾಂಗ್ರೆಸ್ ಸರಕಾರ ಅಭಿವೃದ್ಧಿ ಕಡೆಗಣಿಸಿದೆ, ಅಭಿವೃದ್ಧಿಗೆ ಯಾವುದೇ ಅನುದಾನ ಬರುತ್ತಿಲ್ಲ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಲು ಹೆಣಗಾಡುವ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಸರಕಾರ ಕತ್ತಲು ಭಾಗ್ಯ ನೀಡಿದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಕೆಲವೇ ದಿನಗಳಲ್ಲಿ ಯಾರಿಗೂ ವಿದ್ಯುತ್ ಸಿಗದ ಪರಿಸ್ಥಿತಿ ಉಂಟಾಗಲಿದೆ ಎಂದು ಹೇಳಿದರು.
ನ.ಪಂ.ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ರೈ ಮೇನಾಲ, ದಿನೇಶ್ ಅಡ್ಕಾರ್, ಸುನಿಲ್ ಕೇರ್ಪಳ, ವಿನಯಕುಮಾರ್ ಮುಳುಗಾಡು, ಚನಿಯ ಕಲ್ತಡ್ಕ, ಜಿನ್ನಪ್ಪ ಪೂಜಾರಿ, ಅಜಿತ್ ರಾವ್ ಕಿಲಂಗೋಡಿ, ಬುದ್ದನಾಯ್ಕ್, ಪದ್ಮನಾಭ ಬೀಡು, ಪ್ರದೀಪ್ ಕೋಲ್ಚಾರ್, ಜಯರಾಜ್ ಕುಕ್ಕೆಟ್ಟಿ, ಅಶೋಕ್ ಅಡ್ಕಾರ್, ಅನಿಲ್ ಪರಿವಾರಕಾನ, ಶ್ರೀನಾಥ್ ಬಾಳಿಲ, ಬಾಲಗೋಪಾಲ ಸೇರ್ಕಜೆ, ದಿವಾಕರ ಮುಂಡೋಡಿ, ಬೂಡು ರಾಧಾಕೃಷ್ಣ ರೈ, ಬಾಲಕೃಷ್ಣ ಕೀಲಾಡಿ, ರವಿಚಂದ್ರ ಕೊಡಿಯಾಲಬೈಲು, ಗೋಪಾಲ ನಡುಬೈಲು, ಪಿ.ಕೆ.ಉಮೇಶ್, ಎನ್.ಟಿ.ಹೊನ್ನಪ್ಪ, ಕೇಶವ ಅಡ್ತಲೆ, ಭಾಸ್ಕರ ರಾವ್ ಬಯಂಬು, ಮೋಹಿನಿ ನಾಗರಾಜ್, ಶಶಿಕಲಾ ನೀರಬಿದಿರೆ, ನವೀನ್ ಕುದ್ಪಾಜೆ, ಶಿಲ್ಪಾ ಸುದೇವ್, ಇಂದಿರಾ ಬಿ.ಕೆ, ಕಿಶೋರಿ ಶೇಟ್, ಹರಿಣಿ ದೇರಾಜೆ, ಕಿರಣ್ ಕುರುಂಜಿ, ಸಂಜಯ್ ಕುಮಾರ್, ಪೈಚಾರ್, ಅಶೋಕ್ ಪೀಚೆ, ನವೀನ್ ಎಲಿಮಲೆ, ಪ್ರಬೋದ್ ಶೆಟ್ಟಿ ಮೇನಾಲ, ಸುಧಾಕರ ಕುರುಂಜಿಗುಡ್ಡೆ, ನಿಕೇಶ್ ಉಬರಡ್ಕ, ವರ್ಷಿತ್ ಚೊಕ್ಕಾಡಿ, ಚಂದ್ರಶೇಖರ ಕೇರ್ಪಳ, ಪ್ರಕಾಶ್ ಯಾದವ್, ಲೋಕೇಶ್ ಕೆರೆಮೂಲೆ, ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು