ಸುಳ್ಯ: ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟು ಬಿಜೆಪಿ ಚುನಾವಣಾ ಕಚೇರಿಯ ಉದ್ಘಾಟನೆ ಏ.21ರಂದು ನಡೆಯಿತು. ಶ್ರೀಹರಿ ಕಾಂಪ್ಲೆಕ್ಸ್ನಲ್ಲಿ ತೆರೆದ ಕಚೇರಿಯನ್ನು ಹಿರಿಯರಾದ ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದರು. ಪ್ರತಿಯೊಬ್ಬರೂ ತಾವೇ ಅಭ್ಯರ್ಥಿಗಳು ಎಂದು ತಿಳಿದು ಪ್ರಚಾರ ಮಾಡಿ ಪಕ್ಷವನ್ನು ಗೆಲ್ಲಿಸಬೇಲು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಮಾತನಾಡಿ ‘ಅಧಿಕಾರ, ಸ್ಥಾನ
ಮಾನಕ್ಕಿಂತ ಪಕ್ಷವೇ ಮುಖ್ಯ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರನ್ನು ಗೆಲ್ಲಿಸುವದು ಈಗ ನಮ್ಮ ಮುಂದಿರುವ ಗುರಿ. ಆದುದರಿಂದ
ಗೆಲುವಿನ ಆತ್ಮ ವಿಶ್ವಾಸದೊಂದಿಗೆ ಚುನಾವಣಾ ಕಣಕ್ಕೆ ಇಳಿಯಿರಿ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮಾತನಾಡಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಪ್ರಮುಖರಾದ ಎನ್.ಎ.ರಾಮಚಂದ್ರ, ಕೃಷ್ಣ ಶೆಟ್ಟಿ ಕಡಬ, ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಚಂದ್ರ ಕೋಲ್ಚಾರ್,
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಸುನಿಲ್ ಕೇರ್ಪಳ,ಹರೀಶ್ ಬೂಡುಪನ್ನೆ, ಶ್ರೀನಾಥ್ ಬಾಳಿಲ, ಶಿವಾನಂದ ಕುಕ್ಕುಂಬಳ, ಸುಪ್ರೀತ್ ಮೋಂಟಡ್ಕ, ಶ್ಯಾಮ್ ಪಾನತ್ತಿಲ, ಜಗದೀಶ್ ಸರಳಿಕುಂಜ, ಮಹೇಶ್ ಕುಮಾರ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ಜಯರಾಜ್ ಕುಕ್ಕೆಟ್ಟಿ,
ಶ್ರೀಪತಿ ಭಟ್, ಪುಷ್ಪಾವತಿ ಬಾಳಿಲ, ಸುಭದಾ ಎಸ್.ರೈ, ಇಂದಿರಾ ಬಿ.ಕೆ, ಶೀಲಾ ಅರುಣ ಕುರುಂಜಿ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಮೋಹಿನಿ ನಾಗರಾಜ್, ಕಿಶೋರಿ ಶೇಟ್, ಕರುಣಾಕರ ಹಾಸ್ಪಾರೆ, ವಿನಯಕುಮಾರ್ ಮುಳುಗಾಡು, ರಾಜೇಶ್ ಮೇನಾಲ, ಅಚ್ಚುತ ಗುತ್ತಿಗಾರು, ರಾಧಾಕೃಷ್ಣ ಬೂಡು, ರಾಜೇಶ್ ಕಿರಿಭಾಗ, ಸಂಜೀವ, ಮಧುಸೂಧನ, ಗುರುಸ್ವಾಮಿ, ಅಶೋಕ ಅಡ್ಕಾರ್, ಚಂದ್ರಶೇಖರ ಕೇರ್ಪಳ, ಚಂದ್ರಶೇಖರ ನೆಡಿಲು, ಶೇಖರ ಮಡ್ತಿಲ, ಜಯಪ್ರಕಾಶ್ ಕುಂಚಡ್ಕ, ಹೇಮಂತ್ ಮಠ, ಜಿನ್ನಪ್ಪ ಪೂಜಾರಿ, ಗೋಪಾಲ ನಡುಬೈಲು, ಪ್ರಸಾದ್ ಕಾಟೂರು, ಬುದ್ಧ ನಾಯ್ಕ್, ಸುಧಾಕೆ ತೊಡಿಕಾನ ಬಾಲಕೃಷ್ಣ ರೈ, ಕರುಣಾಕರ ಅಡ್ಪಂಗಾಯ,ಕೃಪಾಶಂಕರ ತುದಿಯಡ್ಕ, ಸೋಮನಾಥ ಪೂಜಾರಿ, ಶಿವಪ್ರಸಾದ್ ನಡುತೋಟ,ಎ.ಟಿ.ಕುಸುಮಾಧರ್,ಶೀನಪ್ಪ ಬಯಂಬು ಮತ್ತಿತರರು ಉಪಸ್ಥಿತರಿದ್ದರು.