ಬೆಂಗಳೂರು: ನಗರದಲ್ಲಿ ಮೇ 20 ಗುಡುಗು ಸಹಿತ ಮಳೆ ಸುರಿದಿದೆ. ಸಂಜೆ ಸುಮಾರು 5 ಗಂಟೆಗೆ ಮಳೆ ಆರಂಭವಾಗಿ ಸುಮಾರು ಅರ್ಧಗಂಟೆ ಸುರಿಯಿತು. ಗುಡುಗು ಸಹಿತ ಮಳೆಯಾಗಿದೆ. ಬೇಸಿಗೆ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಮಳೆ ತುಸು ನೆಮ್ಮದಿ ತಂದಿದೆ. ಅಲ್ಲಲ್ಲಿ ಮರ, ಮರದ ಗೆಲ್ಲುಗಳು ಮುರಿದು ಬಿದ್ದಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜೂನ್ 4 ರಂದು ಕೇರಳ ಪ್ರವೇಶಿಸಲಿರುವ ಮುಂಗಾರು ಮಳೆ ಒಂದು ವಾರದ ನಂತರ ಕರ್ನಾಟಕ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.