ಬಾಳಿಲ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸುಳ್ಯ ತಾಲೂಕು ಘಟಕದ ಸಂಯೋಜನೆಯಲ್ಲಿ ರಾಮನ್ ಇಕೋ ಕ್ಲಬ್ ಮತ್ತು ಸುವಿಚಾರ ಸಾಹಿತ್ಯ ಸಂಘ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇವರ ಸಹಕಾರದೊಂದಿಗೆ ಪರಿಸರ ಜಾಗೃತಿ ಯಾನ – ಪರಿಸರ ಗೀತ ಗಾಯನ, ಔಷಧಿ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ
ಸ್ಪರ್ಧೆ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ನಡೆಯಿತು. ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ದೇವಿಪ್ರಸಾದ್ ಕೆ.ಯನ್. ಸಂಪನ್ಮೂಲ ವ್ಯಕ್ತಿಗಳಾಗಿದ್ದರು.ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಉಪಸ್ಥಿತರಿದ್ದರು. ರಮೇಶ್ ಮೆಟ್ಟಿನಡ್ಕ ಪರಿಸರ ಗೀತೆ ಹಾಡಿದರು.
ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿ, ವಿದ್ಯಾಬೋಧಿನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಉದಯಕುಮಾರ್ ರೈ ವಂದಿಸಿದರು. ಲೋಕೇಶ್ ಬಿ ಕಾರ್ಯಕದರಮ ನಿರ್ವಹಿಸಿದರು. ಈಕೋ ಕ್ಲಬ್ ಸಂಯೋಜಕ ಮೋಹನ್ ಕೆ ಸಿ ವಂದಿಸಿದರು.ಔಷಧ ಸಸ್ಯಗಳ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗುರುಪ್ರಿಯ ಪ್ರಥಮ ಸ್ಥಾನ, ನಿಶಾ ದ್ವಿತೀಯ ಸ್ಥಾನ ಹಾಗೂ ಸಿಂಚನ ಕೆ ಸಿ ತೃತೀಯ ಸ್ಥಾನ ಗಳಿಸಿದರು.





