ನವದೆಹಲಿ: ಭಾರತದ ಪುರುಷರ ಹಾಕಿ ತಂಡ ಏಷ್ಯಾ ಕಪ್ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಬಿಹಾರದ ರಾಜ್ ಗಿರ್ನಲ್ಲಿ ನಡೆದ 2025ರ ಹಾಕಿ ಏಷ್ಯಾ ಕಪ್ ಫೈನಲ್ನಲ್ಲಿ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದೆ. ಈ ಗೆಲುವಿನೊಂದಿಗೆ
ಭಾರತೀಯ ಪುರುಷ ಹಾಕಿ ತಂಡ ಹಾಕಿ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ನಾಲ್ಕನೇ ಭಾರಿ ಭಾರತ ಏಷ್ಯಾ ಕಪ್ ವಿಜಯಿಯಾಗಿದೆ. 2003,2007,2017 ರಲ್ಲಿ ಭಾರತ ಚಾಂಪಿಯನ್ ಆಗಿತ್ತು.ಎಂಟು ವರ್ಷದ ಬಳಿಕ ಭಾರತ ಏಷ್ಯಾ ಕಪ್ ಎತ್ತಿದೆ. ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತದ ಪರ ಮೊದಲ ನಿಮಿಷದಲ್ಲಿಯೇ ಸುಖ್ಜೀತ್ ಸಿಂಗ್ ಗೋಲು ಬಾರಿಸಿದರು. ದಿಲ್ಪ್ರೀತ್ ಸಿಂಗ್ ಎರಡನೇ ಗೋಲು ಬಾರಿಸಿದರು. ಪ್ರಥಮಾರ್ಧದ ವೇಳೆಗೆ ಭಾರತ ಎರಡು ಗೋಲ್ ಮುನ್ನಡೆ ಕಾಯ್ದುಕೊಂಡಿತು.ದಿಲ್ಪ್ರೀತ್ ಸಿಂಗ್ ಮೂರನೇ ಗೋಲು ಮತ್ತು ಅಮಿತ್ ರೋಹಿದಾಸ್ ನಾಲ್ಕನೇ ಗೋಲು ಬಾರಿಸಿದರು. ಸೋನ್ ಡೆಯ್ನ್ ದಕ್ಷಿಣ ಕೊರಿಯಾದ ಏಕೈಕ ಗೋಲು ಬಾರಿಸಿದರು.












