*ಶರೀಫ್ ಜಟ್ಟಿಪಳ್ಳ.
ಸುಳ್ಯ:ಸುಳ್ಯ ಅನ್ಸಾರಿಯ ಎಜುಕೇಶನ್ನ ಅನಿವಾಸಿ ಸಮಿತಿ Ansariya Gulf Coordination Committee (AGCC) ಸಮಿತಿಯು
ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ “ಅನ್ಸಾರಿಯ ಗಲ್ಫ್ ಆಡಿಟೋರಿಯಂ” ಲೋಕಾರ್ಪಣೆ ನವಂಬರ್ 29 ರಂದು ನಡೆಯಲಿದೆ.ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಶೈಕ್ಷಣಿಕ ಮತ್ತು ಸಮನ್ವಯ ಕೇಂದ್ರವಾಗಿ ಬೆಳೆಯುತ್ತಿರುವ ಅನ್ಸಾರಿಯಾ ಎಜುಕೇಶನ್ ಸೆಂಟರ್ 1996 ರಲ್ಲಿ ಅಂದಿನ ಖಾಝಿಯವರಾದ ಮರ್ಹೂಮ್ ಸಯ್ಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ (ಉಳ್ಳಾಲ ತಂಙಳ್) ರವರ ದಿವ್ಯ ಹಸ್ತದಿಂದ ಶಂಕುಸ್ಥಾಪನೆ ಗೊಂಡ ಅನ್ಸಾರಿಯಾ ಯತೀಂಖಾನ ಸುಳ್ಯ ಜಟ್ಟಿಪಳ್ಳ- ನಾವೂರು ರಸ್ತೆಯ
ಇಕ್ಕೆಲದಲ್ಲಿ ನೆಲೆ ನಿಂತಿದೆ. 11 ಅನಾಥ ಮಕ್ಕಳೊಂದಿಗೆ ಸುಳ್ಯ ಮತ್ತು ಅಸುಪಾಸಿನ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಿಸಿದ ಅನ್ಸಾರಿಯಾ ಯತಿಂಖಾನ ಈಗ ಬಡ ಮತ್ತು ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸ ಸಮುಚ್ಚಯ ಕೇಂದ್ರವಾಗಿ ಅನ್ಸಾರಿಯಾ ಎಜುಕೇಶನ್ ಸೆಂಟರ್ ಕಾರ್ಯಚರಿಸುತ್ತಿದೆ.
ಪ್ರಸ್ತುತ ಅರೇಬಿಕ್ ಮದರಸ ಶಿಕ್ಷಣ, ದಹವಾ ಕಾಲೇಜು ಶಿಕ್ಷಣ,ಸ್ಕೂಲ್ ಆಫ್ ಹಿಫ್ಳುಲ್ ಕುರ್ ಆನ್ , ಹೆಣ್ಣು ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಮಹಿಳಾ ಕಾಲೇಜು, ಸ್ಕೂಲ್ ಆಫ್ ದಹವಾ ಈಗೆ 100ಕ್ಕಿಂತ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಯುಕೆಜಿ ಯಿಂದ ಹತ್ತನೆ ತರಗತಿಯವರೆಗೆ ವಿದ್ಯಾಭ್ಯಾಸ ನೀಡುತ್ತಿರುವ ಗ್ರೀನ್ ವ್ಯೂ ಇಂಗ್ಲೀಷ್ ಮಿಡಿಯಾಂ ಸ್ಕೂಲ್ನಲ್ಲಿ 350 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಸಂಸ್ಥೆಯೊಂದಿಗೆ ಸ್ಮಾರ್ಟ್ ಕ್ಲಾಸ್,ಲೈಬ್ರರಿಯನ್ನು ಒಳಗೊಂಡಿದೆ. ಇದರ ಜೊತೆಯಲ್ಲಿ ಅನ್ಸಾರಿಯಾ ಜುಮ್ಮಾ ಮಸೀದಿ ನೆಲೆಗೊಳ್ಳುತಿದೆ
ಈ ಎಲ್ಲಾ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಪಠ್ಯತರ ಚಟುವಟಿಕೆಗಳೊಂದಿಗೆ ಧಾರ್ಮಿಕ ಮತಪ್ರಭಾಷಣ ಇನ್ನಿತರ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸಲು,ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಒಂದು ಸುಸಜ್ಜಿತ ಸಭಾಂಗಣದ ಅಗತ್ಯವಿದೆ ಅದರೊಂದಿಗೆ ಸುಳ್ಯ ಪರಿಸರದ ನಿವಾಸಿಗಳಿಗೆ ಒಂದು ಸುಂದರ ಸಭಾಂಗಣದ ಮತ್ತು ಡೈನಿಂಗ್ ಹಾಲ್ ಗಳನ್ನು ಒಳಗೊಂಡ ಒಂದು ಆಡಿಟೋರಿಯಂನ ಅಗತ್ಯತೆ ಇದೆ ಎಂದು ಮನಗಂಡು ಸುಳ್ಯ ಅನ್ಸಾರಿಯಾ ಸಂಸ್ಥೆಯವರು ಅನಿವಾಸಿ ಭಾರತೀಯರಲ್ಲಿ ಮನವಿ ಮಾಡಿಕೊಂಡರು.
ಮನವಿಯನ್ನು ಪುರಸ್ಕೃರಿಸಿ ವಿದೇಶದಲ್ಲಿ ಉದ್ಯೋಗ ಮತ್ತು ಉದ್ಯಮ ನಡೆಸುತ್ತಿರುವ ಸುಳ್ಯದ ನಿವಾಸಿಗಳು ಒಟ್ಟು ಸೇರಿ ದಮಾಮ್,ಯುನೈಟೆಡ್ ಅರಬ್ ಎಮಿರೇಟ್ಸ್, ಜಿದ್ದಾ,ರಿಯಾದ್,ಬಹರೈನ್, ಒಮಾನ್, ಕತ್ತಾರ್,ಕುವೈತ್ ಸಮಿತಿಯು ಹಾಗೂ ಎಲ್ಲಾ ಸಮಿತಿಯ ಅಂಗ ಸಮಿತಿಗಳನ್ನು ಒಟ್ಟು ಸೇರಿಸಿ ಎಜಿಸಿಸಿ(ಅನ್ಸಾರಿಯಾ ಗಲ್ಪ್ ಸೆಂಟ್ರಲ್ ಕಮಿಟಿ) ಯನ್ನು ರೂಪೀಕರಿಸಿ ಸುಳ್ಯ ಅನ್ಸಾರಿಯಾ ವಠಾರದಲ್ಲಿ ಸುಸಜ್ಜಿತವಾದ ಆಡಿಟೋರಿಯಂ ನಿರ್ಮಾಣ ಮಾಡಬೇಕೆಂಬ ಕನಸಿನೊಂದಿಗೆ ಅಂತರಾಷ್ಟ್ರೀಯ ಸಮಿತಿ ಒಂದು ಪುಟ್ಟ ಹೆಜ್ಜೆಯನ್ನು ಇಡುವ ಪ್ರಯತ್ನ ಕ್ಮೆ ಮುನ್ನುಡಿ ಬರೆಯುತ್ತಾರೆ.
ಅಂತರಾಷ್ಟ್ರೀಯ ಸಮಿತಿ ಸಭೆಯ ತಿರ್ಮಾನದಂತೆ ಅನ್ಸಾರಿಯಾ ಮಕ್ಕಳ ಬೆಳವಣಿಗೆ ಪೂರಕವಾಗಿ ಸ್ಥಿರ ವರಮಾನದ ಉದ್ದೇಶದಿಂದ ಹಾಗೂ ಪರಿಸರ ಸಮಾಜದ ಬಡವರಿಗೂ ಮಿತ ದರದಲ್ಲಿ ಮದುವೆ ಕಾರ್ಯಕ್ರಮಗಳು ನಡೆಸಲೂ ಅವಕಾಶ ಸಿಗುವಂತಾಗಲಿ ಎಂದು ಸುಳ್ಯಕ್ಕೊಂದು ಸುಂದರ ಮದುವೆ ಮತ್ತು ಇನ್ನಿತರ ಕಾರ್ಯಕ್ರಮ ಮಾಡುವ ಸುಸಜ್ಜಿತ ಸಭಾಂಗಣದ ನಿರ್ಮಾಣಕ್ಕೆ ಕಾರ್ಯಯೋಜನೆಯನ್ನು ಹಮ್ಮಿಕೊಂಡು 2019 ರಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದು ಕಾಮಗಾರಿ ಆರಂಭಗೊಳ್ಳುತ್ತದೆ.
ಕಾಮಗಾರಿಯ ಆರಂಭ ಬಹಳ ವೇಗವಾಗಿ ಸಾಗುತ್ತದೆ ಇಡೀ ಅನ್ಸಾರಿಯಾ ಅಂತರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ರಾಷ್ಟ್ರೀಯ ಸಮಿತಿಯ ಮೂಲಕ ಇಡೀ ಜಿಸಿಸಿ ಸಮಿತಿಯು ಅರ್ಥಿಕ ಕ್ರೋಡಿಕರಣ ಕೆಲಸವನ್ನು ಆರಂಬಿಸಿ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಕಾಮಗಾರಿ ವೇಗದಿಂದ ಸಾಗುತ್ತಿದ್ದ ಸಂದರ್ಭದಲ್ಲಿ ಇಡೀ ವಿಶ್ವವನ್ನು ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತದೆ. ಇಂತಹ ಸಂದರ್ಭದಲ್ಲಿ ಎಜಿಸಿಸಿ ಕನಸಿನ ಯೋಜನೆ ನೆನೆಗುದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.
ಇನ್ನೂ ಆಡಿಟೋರಿಯಂ ಕಾಮಗಾರಿಯನ್ನು ಪೂರ್ತಿಗೊಳಿಸುವುದು ಹೇಗೆ ಆತಂಕದಲ್ಲಿ ಎಜಿಸಿಸಿ ಸಮಿತಿ ಕೊರೊನಾ ಆರ್ಭಟ ಸುದೀರ್ಘ ಮೂರು ವರ್ಷಗಳ ಕಾಲ ಇಡೀ ಪ್ರಪಂಚವನ್ನು ಕಾಡಿತು.
ಕೊನೆಗೂ ಕೊರೊನಾ ಕಾಲ ಸ್ವಲ್ಪ ದೂರವಾಯಿತು ಮತ್ತೆ ಪುನಃ ಆಡಿಟೋರಿಯಂ ಕಾಮಗಾರಿಯನ್ನು ಪುನರಾರಂಭ ಮಾಡಬೇಕು ಹೇಗೆ ಮಾಡುವುದು ಎಂಬ ಜಿಜ್ಞಾಸೆಯಿಂದ ಎಲ್ಲಾ ಒತ್ತಡಗಳ ನಡುವೆ ಮತ್ತೆ ಕೆಲಸ ಆರಂಭಿಸುತ್ತಾರೆ. ಮತ್ತೆ ಹಣ ಕ್ರೋಡೀಕರಿಸಿ ಕಾಮಗಾರಿಯನ್ನು ಪೂರ್ತಿ ಗೊಳಿಸಬೇಕೆಂಬ ಹಂಬಲದೊಂದಿಗೆ ಕಾರ್ಯ ಪ್ರವೃತ್ತವಾದ ಎಜಿಸಿಸಿ ಸಮಿತಿ ನಿಧಾನವಾಗಿ ಅಡಿಟೋರಿಯಂ ನಿರ್ಮಾಣ ಪೂರ್ತಿ ಮಾಡಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಎಜಿಸಿಸಿ ಸಮಿತಿ ಅಧೀನದಲ್ಲಿರುವ ಎಲ್ಲಾ ಸಮಿತಿ ಸದಸ್ಯರು ಅವರವರ ದುಡಿಮೆಯ ಸಂಪಾದಿಸಿದ ಸಣ್ಣ,ಸಣ್ಣ ಮೊತ್ತವನ್ನು ಒಟ್ಟು ಸೇರಿಸಿ ಸುಳ್ಯದಲ್ಲಿ ಸುಸಜ್ಜಿತ ಮದುವೆ ಇನ್ನಿತರ ಕಾರ್ಯಗಳಿಗೆ ಯೋಗ್ಯವಾದ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಕಾಮಗಾರಿಯನ್ನು ಪೂರ್ತಿ ಗೊಳಿಸಿರುತ್ತಾರೆ.
ಅನ್ಸಾರಿಯಾ ಎಜಿಸಿಸಿ ಸಮಿತಿಯ ಎಲ್ಲಾ ಸದಸ್ಯರ ಹಗಲಿರುಳಿನ ಪ್ರರಿಶ್ರಮ ವಿದೇಶದಲ್ಲಿ ಬೆವರಿಳಿದು ದುಡಿದ ದುಡಿಮೆಯ ಪ್ರತಿಫಲದ ಕೊಡುಗೆ ಅನ್ಸಾರಿಯಾ ಆಡಿಟೋರಿಯಂ ನ.29 ರಂದು ಲೋಕಾರ್ಪಣೆ ಗೊಳ್ಳಲಿದೆ.
ಇದಕ್ಕಾಗಿ ದುಡಿದ ಸರ್ವರೂ ನಿಜಕ್ಕೂ ಅಭಿನಂದನಾರ್ಹರು…
ಅನ್ಸಾರಿಯಾ ಜಿಸಿಸಿ ಸಮಿತಿಯ ಅಧೀನದಲ್ಲಿರುವ ದಮಾಮ್,ಯುಎಇ,ಜಿದ್ದಾ,ರಿಯಾದ್,ಬಹರೈನ್,ಒಮಾನ್,ಕತ್ತಾರ್,ಕುವೈತ್ ಸೇರಿದಂತೆ ರಾಷ್ಟ್ರೀಯ ಸಮಿತಿಯ ಅಂಗಸಂಸ್ಥೆಗಳ ಸದಸ್ಯರ ಅವಿರತ ಶ್ರಮದ ಫಲವಾಗಿ ಅನಿವಾಸಿ ಸುಳ್ಯದವರ ಕನಸು ನನಸಾಗಿಸುವ ಕಾಲ ಬಂದಿದೆ.
ಪ್ರಸ್ತುತ ಅನ್ಸಾರಿಯಾ ಎಜಿಸಿಸಿ ಸಮಿತಿ ಅಧ್ಯಕ್ಷರಾಗಿ ಸಿ.ಪಿ ಸಂಶು(ಅಡ್ಕಾರ್) ಉಪಾಧ್ಯಕ್ಷರಾಗಿ ವಿ.ಕೆ ಮುನೀರ್ ಜಟ್ಟಿಪಳ್ಳ ,ಪ್ರಧಾನ ಕಾರ್ಯದರ್ಶಿ ಯಾಗಿ ಸಲೀಂ ಇಸ್ಮಾಯಿಲ್,ಕೋಶಾಧಿಕಾರಿ ಯಾಗಿ ಹಾಜಿ ಹಮೀದ್ ಎಸ್ ಎಂ ….ರವರು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಥ್ ನೀಡಿದ ಮಾತೃಸಂಸ್ಥೆ:
ಅನ್ಸಾರಿಯಾ ಎಜಿಸಿಸಿ ಸಮಿತಿಯ ಮಹತ್ವಾಕಾಂಕ್ಷೆಯ ಯೋಜನೆ ಸಕಲ ರೀತಿಯಲ್ಲಿ ಸಹಕಾರ ನೀಡಿದ ಅನ್ಸಾರಿಯಾ ಮಾತೃಸಂಸ್ಥೆ ಅನ್ಸಾರಿಯಾ ಎಜುಕೇಶನ್ ಸೆಂಟರ್ ಈ ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಮರ್ಹೂಮ್ ಹಾಜಿ ಮಹಮ್ಮದ್ ಜನತಾ,ಮತ್ತೆ ಅಧ್ಯಕ್ಷರಾಗಿ ಸೇವೆಸಲ್ಲಿಸಿ ಮರ್ಹೂಮ್ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಇವರಿಬ್ಬರೂ ಅನ್ಸಾರಿಯಾಲ್ಲಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವುದು ಸ್ಮರಣೇಯ.
ಪ್ರಸ್ತುತ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ ಹಾಗೂ 21 ನಿರ್ದೇಶಕರ ತಂಡವು ಕಾರ್ಯ ನಿರ್ವಹಿಸುತ್ತಿದ್ದಾರೆ.
(ಶರೀಫ್ ಜಟ್ಟಿಪಳ್ಳ ಪತ್ರಕರ್ತರು. ಅನ್ಸಾರಿಯಾ ಎಜುಕೇಶನ್ ಸೆಂಟರ್ನ ಕಾರ್ಯದರ್ಶಿ.)