*ಪಿ.ಜಿ.ಎಸ್.ಎನ್.ಪ್ರಸಾದ್.
ಸುಳ್ಯ: ರಾತ್ರಿ ವೇಳೆ ದಕ್ಷಿಣ ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.. ಗಾಳಿ ಗುಡುಗು ಸಿಡಿಲು ಸಹಿತ ಅನೇಕ ಕಡೆಗಳಲ್ಲಿ ಭರ್ಜರಿ ಮಳೆ ಸುರಿದಿದೆ. ರಣ ಬಿಸಿಲಿನ ಬೇಗೆಗೆ ಬಸವಳಿದಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ನಾಲ್ಕಾರು ದಿನಗಳ ಬಳಿಕ ಮತ್ತೆ ಇನ್ನೇನು ತೋಟಗಳಿಗೆ ನೀರು ಹಾಯಿಸಬೇಕೆನ್ನುವಷ್ಟರಲ್ಲಿ ವರುಣ ಕೃಪೆ
ತೋರಿದ್ದಾನೆ. ನೈರುತ್ಯ ಮುಂಗಾರು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮುಂದುವರಿಯಲು ಮೀನ ಮೇಷ ಎಣಿಸುತ್ತಿದೆ. ಈಗಿನ ಅಂದಾಜಿನ ಪ್ರಕಾರ ಜೂನ್ ಪ್ರಥಮ ವಾರವಷ್ಟೇ ಕೇರಳಕ್ಕೆ ಕಾಲಿಡಬಹುದು ಎನ್ನಲಾಗಿದೆ. ಕಳೆದ ವರ್ಷ ಮೇ ಮೂರನೇ ವಾರದಲ್ಲೇ ಕರ್ನಾಟಕ ಕರಾವಳಿ ಪ್ರವೇಶಿಸಿತ್ತು ನೈರುತ್ಯ ಮುಂಗಾರು ಮಾರುತ.. ಆದರೆ IMD ಅಧಿಕೃತ ಘೋಷಣೆ ಮಾಡಿರುವುದು 2022 ರ ಮೇ 30 ರಂದು.
ಕಳೆದ ಸಂಜೆ ಬೆಂಗಳೂರಲ್ಲಿ ಗಾಳಿ, ಭಾರೀ ಗಾತ್ರದ ಆಲಿಕಲ್ಲು ಸಹಿತ
ಭರ್ಜರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ರಾತ್ರಿ ದಕ್ಷಿಣ ಕನ್ನಡದ ಹೆಚ್ಚಿನ ಕಡೆಗಳಲ್ಲಿ ಗುಡುಗು ಗಾಳಿ ಸಹಿತ ಭರ್ಜರಿ ಮಳೆ ಸುರಿದಿದೆ. ಭಾರೀ ಗಾಳಿಗೆ ಸಾಕಷ್ಟು ಹಾನಿಯೂ ಸಂಭವಿಸಿದೆ. ಗರಿಷ್ಟ ಮಳೆ ಸುಳ್ಯ ತಾಲೂಕು ಗುತ್ತಿಗಾರಿನ ಕಮಿಲದಲ್ಲಿ 68 ಮಿ.ಮೀ., ಬಳ್ಪ-ಪಟೋಳಿ 61, ದೊಡ್ಡತೋಟ- ಕೀಲಾರ್ಕಜೆ 51, ಕಲ್ಲಾಜೆ, ಸುಬ್ರಹ್ಮಣ್ಯ(ಸರಾಸರಿ) ತಲಾ 44, ಕಲ್ಮಡ್ಕ 42,ಬಳ್ಪ 35, ಕರಿಕ್ಕಳ 32, ಮೆಟ್ಟಿನಡ್ಕ 31, ಕೇನ್ಯ 28, ಕಡಬ- 26, ಕೋಡಿಂಬಳ 25, ಎಣ್ಮೂರು-ಅಲೆಂಗಾರ 22, ಬಾಳಿಲ 21, ಅಯ್ಯನಕಟ್ಟೆ, ಎಣ್ಮೂರು ತಲಾ 20, ಹೇಮಳ 19, ಮುರುಳ್ಯ, ಎಡಮಂಗಲ ತಲಾ 18, ಬೆಳ್ಳಾರೆ-ಕಾವಿನಮೂಲೆ 16, ಹರಿಹರ-ಮಲ್ಲಾರ 15, ಕಟ್ಟ-ಕೊಲ್ಲಮೊಗ್ರ, ಪೆಲತ್ತಡ್ಕ-ಪೆರುವಾಜೆ ತಲಾ 10, ಕಾಸರಗೋಡು-ಹಳೆಮನೆ 44, ಕಲ್ಲಕಟ್ಟ 20, ಪುತ್ತೂರು-ಬಂಗಾರಡ್ಕ 40, ಬೆಳ್ತಂಗಡಿ-ಮುಂಡಾಜೆ 48, ನಿಡ್ಲೆ 24, ಅಡೆಂಜ-ಉರುವಾಲು 18, ಪುತ್ತೂರು-ಶಾಂತಿಗೋಡು 17, ಕೊಳ್ತಿಗೆ-ಎಕ್ಕಡ್ಕ 14, ಬಲ್ನಾಡು 08, ಬೆಳ್ತಂಗಡಿ-ಇಳಂತಿಲ 09, ಅಲ್ಲಾಟ ಬಡಾವಣೆ 07, ಕಂಪದಕೋಡಿ 06, ಬಂಟ್ವಾಳ-ಕೆಲಿಂಜ 03 ಮಿ.ಮೀ.ನಷ್ಟು ಮಳೆಯಾಗಿದೆ. ಬೆಂಗಳೂರಿನ ಹೆಚ್ಚಿನ ಕಡೆಗಳಲ್ಲಿ ಭಾರೀ ಗಾತ್ರದ ಆಲಿಕಲ್ಲು, ವಿಪರೀತ ಗಾಳಿ, ಸಿಡಿಲು ಸಹಿತ ಮಳೆ ಬಂದ ಬಗ್ಗೆ ವರದಿಯಾಗಿದೆ.ಇಂದು ಕೂಡಾ ಅಲ್ಲಲ್ಲಿ ಮಳೆ ಸುರಿವ ಸಾಧ್ಯತೆ ಇದೆ.