*ಪಿ.ಜಿ.ಎಸ್.ಎನ್.ಪ್ರಸಾದ್.
ಸುಳ್ಯ: ಇಂದಿನಿಂದ ಪುನರ್ವಸು ಆರಂಭ. ದುರ್ಬಲವಾಗಿಯೇ ಸಾಗಿ ಬಂದ ಮುಂಗಾರು ಆರ್ದ್ರಾ ನಕ್ಷತ್ರದ ಕಳೆದ ನಾಲ್ಕು ದಿನಗಳಿಂದ ಬಲಗೊಂಡಿದ್ದು ಭರ್ಜರಿಯಾಗಿ ಮುಂದುವರಿದಿದೆ. ಕಾಸರಗೋಡು ದ.ಕ, ಉಡುಪಿ, ಮಡಿಕೇರಿ ಹಾಗೂ ರಾಜ್ಯದ ದಕ್ಷಿಣದ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದೆ. ಎಲ್ಲಡೆ ನದಿ, ಹಳ್ಳ ಕೊಳ್ಳಗಳು
ತುಂಬಿ ಹರಿಯುತಿದೆ. ಜಲ ಪಾತಗಳು ಜೀವ ಕಳೆ ಪಡೆದು ಹಾಲ್ನೊರೆ ಸೂಸಿ ಧುಮುಕಿ ಹರಿಯುತಿದೆ. ಎಲ್ಲೆಡೆ ನೀರೊರತೆಗಳು ಟಿಸಿಲೊಡೆದಿದೆ. ಮಳೆಗಾಲದ ಅತಿ ವಿಶಿಷ್ಠ ಅನುಭವ ಆಗುತಿದೆ. ಕುಳಿರ್ಗಾಳಿ ಬೀಸಿ ಮೈ ಮನ ತಂಪೆರೆಯುತಿದೆ. 3-4 ದಿನಗಳಿಂದ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಜಲರಾಶಿ ತುಂಬಿ ತುಳುಕುತಿದೆ. ಅಲ್ಲಲ್ಲಿ ಆವಾಂತರಗಳು ಅಧಿಕವಾಗುತಿದೆ. ಆದುದರಿಂದಲೇ ಮುನ್ನೆಚ್ಚರಿಕಾ ಕ್ರಮವಾಗಿಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ನದಿ,ಪಾತ್ರ, ಸಮುದ್ರ ಕಿನಾರೆಗಳಲ್ಲಿ ಇರುವವರು ತೆರಳುವವರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.ಇಂದು ಕೂಡಾ ಇದೇ ವಾತಾವರಣ ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಮಲೆನಾಡಿನ ವೈಭವ ಕಂಗೊಳಿಸುತ್ತಿದೆ.
ಎಲ್ಲಿ ಎಷ್ಟು ಮಳೆ:
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬಜಗೋಳಿಯಲ್ಲಿ 245 ಮಿ.ಮೀ.ನಷ್ಟು ಭರ್ಜರಿ ಮಳೆ ಸುರಿದಿದೆ. ಕಾಸರಗೋಡು -ಕಲ್ಲಕಟ್ಟ 220, ಮಿತ್ತೂರು 201,ಸಿದ್ಧಕಟ್ಟೆ 195, ಪಾಣಾಜೆ 190, ಕೆಲಿಂಜ 181, ದೊಡ್ಡತೋಟ 178, ಕೈರಂಗಳ 166, ಸರ್ವೆ 164, ಕಜೆ-ಮಂಚಿ, ಉಬರಡ್ಕ ತಲಾ 160, ಮಡಿಕೇರಿಯ ಎಂ ಚೆಂಬು, ಸುಳ್ಯ ನಗರ ತಲಾ 152, ಚರ್ಚ್ ರಸ್ತೆ ಬೆಳ್ತಂಗಡಿ, ಬಾಳಿಲ (ಉ), ಹಳೆ ನೇರಂಕಿ ತಲಾ 150, ಅಲ್ಲಾಟ ಬಡಾವಣೆ 146, ಕಡಬ- ಗೋಳಿತ್ತಡಿ 143, ವಾಲ್ತಾಜೆ-ಕಂದ್ರಪ್ಪಾಡಿ 142, ಬಾಳಿಲ (ಪ), ಎಡಮಂಗಲ ತಲಾ 141, ಮುಂಡೂರು, ಕಲ್ಮಡ್ಕ ತಲಾ 140, ಮರ್ಕಂಜ 139, ಎಣ್ಮೂರು 137, ಬಾಳಿಲ (ದ), ಇರಾ- ಉಳ್ಳಾಲ ತಲಾ 136, ಬಂಗಾರಡ್ಕ 135, ಗುತ್ತಿಗಾರು 132, ಕುಂಬ್ಳೆ-ಎಡನಾಡು 130, ಬೆಳ್ತಂಗಡಿ ನಗರ 126, ಬೆಳ್ಳಾರೆ- ಕಾವಿನಮೂಲೆ, ಮುರುಳ್ಯ-ಶೇರ ತಲಾ 125, ಮಡಪ್ಪಾಡಿ 124, ನಡುಗಲ್ಲು 123, ಕಲ್ಲಾಜೆ, ಕಮಿಲ ತಲಾ 120, ಚೊಕ್ಕಾಡಿ 118, ಪಂಬೆತ್ತಾಡಿ (ವನಸಿರಿ ಫಾರ್ಮ್) 117, ಕೇನ್ಯ , ನೆಲ್ಯಾಡಿ ತಲಾ 116, ಕಂಪದಕೋಡಿ 113, ಹರಿಹರ-ಮಲ್ಲಾರ 112, ಬಳ್ಪ 110, ಕೋಡಿಂಬಳ 108, ಇಳಂತಿಲ-ಕೈಲಾರು 107, ಕಡಬ 106, ಬಳ್ಪ- ಪಟೋಳಿ 103, ಮುಂಡಾಜೆ 100 ….ಶತಕದಾಟ. ಉಳಿದಂತೆ ಸುಬ್ರಹ್ಮಣ್ಯ (2)-ದೇವರಗದ್ದೆ 96, ಸುಬ್ರಹ್ಮಣ್ಯ (1)-ಶೇಷಕುಟೀರ, ಕೊಳ್ತಿಗೆ-ಎಕ್ಕಡ್ಕ ತಲಾ 94, ಬಲ್ನಾಡು 93, ಅಡೆಂಜ-ಉರುವಾಲು 92, ಪೆಲತ್ತಡ್ಕ-ಪೆರುವಾಜೆ 85, ಕೊಲ್ಲಮೊಗ್ರ 83, ಕಡಮಕಲ್ ಎಸ್ಟೇಟ್ 69 ಮಿ.ಮೀ.ನಷ್ಟು ಉತ್ತಮ ಮಳೆಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸಂಭವ:
ರಾಜ್ಯದ್ಯಂತ ಮುಂಗಾರು ಚುರುಕುಪಡೆದಿದ್ದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮಳೆಯಾಗುವ ಮುನ್ಸೂಚನೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 45-55 ಕಿ.ಮೀ ಇಂದ 65 ಕಿ.ಮೀ ವರೆಗೂ ಬೀಸುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.