ಸುಳ್ಯ:ಬಾರಿ ಮಳೆಯ ಕಾರಣ ಶಾಂತಿ ನಗರ ಕ್ರೀಡಾಂಗಣದ ದಕ್ಷಿಣ ಭಾಗಕ್ಕೆ ಹಾಕಿದ ಮಣ್ಣು ಅಗಾಧ ಪ್ರಮಾಣದಲ್ಲಿ ಕೊಚ್ಚಿಹೋಗುತ್ತಿದೆ. ನೀರು ಹೋಗಲು ಪಾತಿಗಳನ್ನು ಅಳವಡಿಸಿದ್ದರೂ ನೀರು ಈ ಪಾತಿಯನ್ನೂ ಮೀರಿ ಧುಮ್ಮಿಕ್ಕುತ್ತಿದೆ. ನೀರಿನ ರಭಸಕ್ಕೆ ಪಾತಿಗಳು ದಿಕ್ಕು ಪಾಲಾಗಿದೆ. ಮಳೆ
ಇದೇ ರೀತಿ ಮುಂದುವರಿದರೆ ಮಣ್ಣು ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ. ಜೊತೆಗೆ ಮಳೆ ನೀರು ಈಗಾಗಲೇ ಇರುವ ಸಣ್ಣ ತಡೆಗೋಡೆಯನ್ನು ಕೊರೆಯುತ್ತಿದೆ. ಇದರಿಂದ ತಡೆಗೋಡೆಗೂ ಅಪಾಯವಿದೆ. ಮಳೆಯ ನೀರು ಹರಿಯುವ ಕೆಳಭಾಗದ ಕಣಿಯಲ್ಲಿ ಮಣ್ಣು ತುಂಬುತ್ತಿದ್ದು ಕೇವಲ ಒಂದೆರಡು ಅಡಿಗಳಷ್ಟು ಮಾತ್ರ ಬಾಕಿ ಇದೆ. ತಡೆಗೋಡೆಯನ್ನು ತಕ್ಷಣ ಎತ್ತರಿಸುತ್ತೇವೆ ಎಂದು ಕಳೆದ ತಿಂಗಳಲ್ಲಿ ಭೇಟಿ ನೀಡಿದ ಶಾಸಕರು, ಸಹಾಯಕ ಆಯುಕ್ತರ ತಂಡ ಭರವಸೆ ನೀಡಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಳ ಭಾಗದಲ್ಲಿರುವ ವಿದ್ಯುತ್ ಕಂಬಗಳು ಧರಾಶಾಯಿಯಾಗುವ ಸಾಧ್ಯತೆಯೂ ಇದೆ.