*ಪಿಜಿಎಸ್ಎನ್ ಪ್ರಸಾದ್.
ಸುಳ್ಯ: ಕಳೆದ ಮೂರ್ನಾಲ್ಕು ದಿನಗಳಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿಯುತ್ತಿದ್ದ ಸಣ್ಣ ಪುಟ್ಟ ಮಳೆ ನಿನ್ನೆ ಸಂಜೆ ಹೆಚ್ಚು ವ್ಯಾಪಕವಾಗಿ ಸುರಿದಿದೆ. ವರುಣನಿಗೆ ಪವನನೂ ಸಾಥ್ ನೀಡಿದ್ದ. ಮಳೆಯ ಅಭಾವದಿಂದಾಗಿ ಕುಡಿಯುವ ನೀರಿಗೂ ಹೆಚ್ಚಿನ ಕಡೆಗಳಲ್ಲಿ ತತ್ವಾರ ಉಂಟಾಗಿತ್ತು. ನಿನ್ನೆಯ ಮಳೆ ರೈತರ ಮೊಗದಲ್ಲಿ ಒಂದಷ್ಟು ಆಶಾಭಾವನೆ ಮೂಡಿಸಿದೆ.. ನಿನ್ನೆ ಸಂಜೆ
ಸುಳ್ಯ ತಾಲೂಕಿನ ಬೆಳ್ಳಾರೆ-ಕಾವಿನಮೂಲೆಯಲ್ಲಿ ಗರಿಷ್ಟ 50 ಮಿ.ಮೀ.ಮಳೆ ದಾಖಲಾಗಿದೆ. ಉಳಿದಂತೆ ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ ತಲಾ 48, ಚೊಕ್ಕಾಡಿ 39, ಸುಬ್ರಹ್ಮಣ್ಯ, ಸುಳ್ಯ ನಗರ ತಲಾ 38, ಹರಿಹರ ಮಲ್ಲಾರ, ಕೊಲ್ಲಮೊಗ್ರ ತಲಾ 33, ಕಲ್ಲಾಜೆ, ಬಳ್ಪ ತಲಾ 28, ಮೆಟ್ಟಿನಡ್ಕ 26, ನಡುಗಲ್ಲು 25, ಕಮಿಲ 24, ಅಜ್ಜಾವರ 19, ಕಲ್ಮಡ್ಕ 18, ಕರಿಕ್ಕಳ 16, ಕೇನ್ಯ, ಪೆಲತ್ತಡ್ಕ-ಪೆರುವಾಜೆ ತಲಾ 12, ಕೊಳ್ತಿಗೆ-ಎಕ್ಕಡ್ಕ 16, ಮುರುಳ್ಯ 06, ಮಡಿಕೇರಿಯ ಎಂ ಚೆಂಬು 48, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು 33 ಇಳಂತಿಲದ ಕೈಲಾರು 29, ಕಂಪದಕೋಡಿ 31, ಕಡಬ-ಕೋಡಿಂಬಳ 05 ಮಿ.ಮೀ.ನಷ್ಟು ಮಳೆಯಾಗಿದೆ. ಇಂದೂ ಮಳೆ ಮುಂದುವರಿದೀತೇ ಅಂತ.. ನಿಖರವಾದ ಮಳೆ ಮುನ್ಸೂಚನೆ ನೀಡಬಲ್ಲ ಸಾಯಿಶೇಖರ ಕರಿಕಳ ಹಾಗೂ ರಘುರಾಮ ಕಂಪದಕೋಡಿಯವರಲ್ಲಿ ಕೇಳೋಣ.!
‘ಅಶ್ವಿನೀ ಸಸ್ಯನಾಶಿನಿ’ ಮಳೆ ನಕ್ಷತ್ರದ ಕುರಿತು ಹಿರಿಯರ ಒಂದು ಮಾತಿದೆ. ಬಹುಶಃ ಅದು (ಎಪ್ರಿಲ್ 13/14 ರಿಂದ 26/27) ಅಶ್ವಿನೀ ನಕ್ಷತ್ರದ ಅವಧಿಯಲ್ಲಿ ಮಳೆಯಾದಿದ್ದರೆ ಸಸ್ಯಸಂಕುಲ ಉಳಿಯಲಾರದು ಅಂತ ಜನಪದರು ಕಂಡ ಸತ್ಯ ಇರಬಹುದೇನೋ..