ಸುಳ್ಯ: ಸುಳ್ಯದ ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜಿನ ಬಳಿಯಲ್ಲಿ ನಡೆಸುತ್ತಿರುವ ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ನಲ್ಲಿ ವಾರ್ಷಿಕ ಬೇಸಿಗೆ ಚಿಣ್ಣರ ಕಲರವ ಏ.18ರಿಂದ ಆರಂಭಗೊಂಡಿದೆ.
ಹಿರಿಯ ಪತ್ರಕರ್ತ ಜೆ.ಕೆ.ರೈ ಶಿಬಿರವನ್ನು ಉದ್ಘಾಟಿಸಿದರು.ಕಲಾವಿದ ಮಯೂರ್ ಸಾಗರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸುಳ್ಯದ ಅಂಜಲಿ
ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶುಭಕರ ಬೊಳುಗಲ್ಲು, ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ನ ಸಂಚಾಲಕಿ ಗೀತಾಂಜಲಿ ಟಿ.ಜಿ ಉಪಸ್ಥಿತರಿದ್ದರು. ಶಿಬಿರ ಏ.25ರ ತನಕ ನಡೆಯಲಿದೆ.
ದಾಖಲಾತಿ ಆರಂಭ:
ಮೊಂಟೆಸ್ಸೋರಿ ಪ್ಲೇ ಸ್ಕೂಲ್ನಲ್ಲಿ
2023-24ನೇ ಸಾಲಿನಲ್ಲಿ ದಾಖಲಾತಿ ಆರಂಭಗೊಂಡಿದೆ. ಇಲ್ಲಿ 2 ರಿಂದ 6 ವಯಸ್ಸಿನ ಮಕ್ಕಳಿಗೆ ಮೊಂಟೆಸ್ಸೋರಿ ಶಿಕ್ಷಣ ನೀಡಲಾಗುತ್ತದೆ.
ಪ್ಲೇ ಹೋಮ್ನಲ್ಲಿ ಪ್ರತಿ ಮಗುವಿಗೆ ವೈಯುಕ್ತಿಕ ಆದ್ಯತೆ ನೀಡಲಾಗುತ್ತಿದ್ದು ಅನುಭವ ಸಹೀತ ಕಲಿಕಾ ಪದ್ಧತಿ ಇದಾಗಿದೆ. ಸಂಪೂರ್ಣ ಮನೆಯ ವಾತಾವರಣದಲ್ಲಿ ಮಕ್ಕಳಲ್ಲಿ ಆದರ್ಶ ಮತ್ತು ಮೌಲ್ಯಗಳ ವರ್ಧನೆಯ ಶಿಕ್ಷಣ ಆರೋಗ್ಯಕರ ಆಹಾರ ನೀಡಲಾಗುತ್ತದೆ. ಮಕ್ಕಳಿಗೆ ಮೂರು ಹಂತಗಳಲ್ಲಿ ಶಿಕ್ಷಣ ನೀಡಲಾಗುತ್ತದೆ. 2 ರಿಂದ 3 ವರ್ಷದ ಮಕ್ಕಳಿಗೆ ಪ್ಲೇ ಗ್ರೂಪ್ನಲ್ಲಿ ಆಹ್ಲಾದಕರ ಕಲಿಕೆ, 3ರಿಂದ 4 ವರ್ಷದ ಮಕ್ಕಳಿಗೆ ಪ್ರಿ ಕೆ.ಜೆ.ಯಲ್ಲಿ ವಿಶ್ವಾಸ ಸಹಿತ ಕಲಿಕೆ, 4ರಿಂದ6 ವರ್ಷದ ಮಕ್ಕಳಿಗೆ ಪ್ರಿ ಪ್ರೈಮರಿಯಲ್ಲಿ ಸ್ಪೂರ್ತಿದಾಯಕ ಕಲಿಕೆಯ ಮೂಲಕ ಮಕ್ಕಳನ್ನು ಬೆಳೆಸಲಾಗುತ್ತದೆ.ಇಲ್ಲಿ
ಸಂಪೂರ್ಣ ಚಟುವಟಿಕೆ ಆಧಾರಿತ ಶಿಕ್ಷಣ ನೀಡಲಾಗುತ್ತದೆ. ಸಂಪೂರ್ಣ ಚಟುವಟಿಕೆ ಆಧಾರಿತ ಶಿಕ್ಷಣ ಪದ್ಧತಿಯೊಂದಿಗೆ ಮಕ್ಕಳ ಸಾಮಾಜಿಕ ಹಾಗೂ ಭಾವನಾತ್ಮಕ ಕಲಿಕೆಗೆ ಪೂರಕವಾದ ಕಲಿಕಾ ಸಾಮಾಗ್ರಿಗಳನ್ನು ಬಳಸಿಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಸಂಸ್ಥೆಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಗೀತ, ಚಿತ್ರಕಲೆ:
ಸುಳ್ಯದ ಸೂಕ್ತ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಸಂಗೀತ, ಚಿತ್ರಕಲೆ ತರಗತಿ ಹಾಗೂ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಜೆಯ ಟ್ಯೂಷನ್ ತರಗತಿಗಳನ್ನು ನಡೆಸಲಾಗುತ್ತಿದೆಎನ್ನುತ್ತಾರೆ ಅಂಜಲಿ ಮೋಂಟೆಸ್ಸೋರಿ ಪ್ಲೇ ಸ್ಕೂಲ್ನ ಸಂಚಾಲಕಿ ಗೀತಾಂಜಲಿ ಟಿ.ಜಿ.
ದಾಖಲಾತಿಗಾಗಿ ಸಂಪರ್ಕಿಸಿ:
ಅಮೃತ ವರ್ಷಿಣಿ ನಿಲಯ ಜ್ಯೂನಿಯರ್ ಕಾಲೇಜು ಹತ್ತಿರ ಸುಳ್ಯ.ದ.ಕ.
ದೂರವಾಣಿ:
9591762980, 9591215980, 9740043041,