ಸುಳ್ಯ:ನಿರ್ಮಾಣ ಅರ್ಧಕ್ಕೆ ಸ್ಥಗಿತಗೊಂಡಿರುವ ಸುಳ್ಯದ ಅಂಬೇಡ್ಕರ್ ಭವನವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವೀಕ್ಷಿಸಿದರು. ಮೈಸೂರಿಗೆ ತೆರಳುವಾಗ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿಯವರನ್ನು ದಲಿತ ಮುಖಂಡರು ಭೇಟಿಯಾಗಿ ಅಂಬೇಡ್ಕರ್ ಭವನ ವೀಕ್ಷಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಅವರು ಆಗಮಿಸಿ ವೀಕ್ಷಣೆ ಮಾಡಿದರು. ಈ ಕಾಮಗಾರಿಯ ಎಸ್ಟಿಮೇಟ್ ಮತ್ತಿತರ
ಕಾಮಗಾರಿಗಳ ವಿವರವನ್ನು ಪರಿಶೀಲನೆ ಮಾಡುವುದಾಗಿ ಅವರು ದಲಿತ ಮುಖಂಡರುಗಳಿಗೆ ತಿಳಿಸಿದರು.ಅಂಬೇಡ್ಕರ್ ಭವನದ ಕಾಮಗಾರಿ ವರ್ಷಗಳಿಂದ ನಡೆಯುತ್ತಿದ್ದು ಕಾಮಗಾರಿ ಅರ್ಧದಲ್ಲೇ ನಿಂತಿದೆ. ಈ ಕುರಿತು ಪರಿಶೀಲನೆ ಮಾಡಿ ಅಂಬೇಡ್ಕರ್ ಭವನ ಪೂರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಮಂಜುನಾಥ್, ಮುಖಂಡರಾದ ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ಕೇಶವ ಮಾಸ್ತರ್ ಹೊಸಗದ್ದೆ, ಕರುಣಾಕರ ಪಲ್ಲತ್ತಡ್ಕ, ಅಚ್ಚುತ ಮಲ್ಕಜೆ, ಪರಮೇಶ್ವರ, ತೀರ್ಥಪ್ರಸಾದ್ ಇದ್ದರು.
ಭೂತಬಂಗಲೆಯಾಗಿರುವ ಅಂಬೇಡ್ಕರ್ ಭವನ ಕಟ್ಟಡ:
ಹಲವು ವರ್ಷಗಳಿಂದ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಮತ್ತು ಕಾಮಗಾರಿ ಅರ್ಧಕ್ಕೆ ಸ್ತಗಿತಗೊಂಡಿರುವ ಸುಳ್ಯದ ನೂತನ ಅಂಬೇಡ್ಕರ್ ಭವನ ಕಟ್ಟಡದ ಸುತ್ತ ಈಗ ಕಾಡು, ಪೊದೆ ಬಳ್ಳಿಗಳು ಬೆಳೆದು ಕಟ್ಟಡ ಭೂತ ಬಂಗಲೆಯಂತಾಗಿದೆ. ಕಟ್ಟಡ ಹಾಗೂ ಬೃಹತ್ ಕಂಬಗಳು ಅನಾಥವಾಗಿ ನಿಂತಿದೆ.