ಸುಳ್ಯ: ಕೆವಿಜಿ ಅಮರ ಜ್ಯೋತಿ ಪಿಯುಸಿ ಕಾಲೇಜಿನಲ್ಲಿ ಫ್ರೇಶರ್ಸ್ ಡೇ ಹಾಗೂ ಪ್ರತಿಭಾ ದಿನಾಚರಣೆ ಆಚರಿಸಲಾಯಿತು. ಪ್ರಥಮ ಪಿಯುಸಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.ದ್ವಿತೀಯ ಪಿ ಯು ಸಿ ಮಕ್ಕಳಿಂದ ಆಯೋಜಿಸಲಪಟ್ಟ ಕಾರ್ಯಕ್ರಮದಲ್ಲಿ
ಉಪಪ್ರಾಂಶುಪಾಲರಾದ ದೀಪಕ್ ವೈ. ಆರ್ ಉಪನ್ಯಾಸಕ ವೃಂದ ಬೋದಕೇತರ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ಪರಿಚಯ,ಪ್ರತಿಭೆಯ ಪ್ರದರ್ಶನ ಮನರಂಜನೆಯ ಕಾರ್ಯಕ್ರಮದ ಮುಖ್ಯ ಅಂಗವಾಗಿತ್ತು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಧುರ ಭಾಷಿಣಿ ಸ್ವಾಗತಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಪ್ರಥಮ್ ಶೇಖರ್ ಸಂಜನಾ ರಾವ್ ,ಸಿಂಚನ ಕಾರ್ಯಕ್ರಮ ನಿರೂಪಿಸಿದರು. ನಿಧಿ ರಿತಿಕಾ ವಂದಿಸಿದರು.ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೆವಿಜಿ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ ಹಾಗೂ ಕಾಲೇಜಿನ ಸಿ ಇ ಒ ಡಾ. ಉಜ್ವಲ್ ಯು. ಜೆ ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.