ಅಜ್ಜಾವರ:ಚೈತ್ರ ಯುವತಿ ಮಂಡಲ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ ಇವುಗಳ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025ರ ಅಂಗವಾಗಿ ಶುಭ್ರತೆಗೊಂದು ಕಿರು ಹೆಜ್ಜೆ ಎಂಬ ಧ್ಯೇಯದೊಂದಿಗೆ ಪೊರಕೆ ತಯಾರಿಸಿ ಶಾಲೆಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ

ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್, ಉಪಾಧ್ಯಕ್ಷರಾದ ಮಾಲತಿ, ಗೀತಾಂಜಲಿ ಗುರುರಾಜ್, ಭುವನ ಕೂಕ್ಲುಮಜಲು, ಜಯಲಕ್ಷ್ಮಿ, ಚಂದ್ರಾವತಿ, ಧರ್ಮಾವತಿ,ಕು. ಧರಿತ್ರಿ,
ವನ್ಯಶ್ರೀ,ಯುವಕ ಮಂಡಲದ ಅಧ್ಯಕ್ಷ ಗುರುರಾಜ್, ಕಾರ್ಯದರ್ಶಿ ನವೀನ್, ಕೋಶಾಧಿಕಾರಿ ಲೋಕೇಶ್,
ಗೌರವಸಲಹೆಗಾರದ ಸೂರ್ಯ ಕುಮಾರ್,ವಿನಯ್ ನಾರಾಲು,ಚರಣ್ ಉಪಸ್ಥಿತರಿದ್ದರು. ಪ್ರಥಮವಾಗಿ ಇವರು ತಯಾರಿಸಿದ ಪೊರಕೆಗಳನ್ನು ಅಜ್ಜಾವರ ಪ್ರೌಢಶಾಲೆಗೆ ವಿತರಿಸಲಾಯಿತು.













