ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟಿರುವವರ ಸಂಖ್ಯೆ 2,000ಕ್ಕೆ ಏರಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭೂಕಂಪದ ತೀವ್ರತೆಗೆ ಹಲವಾರು ಗ್ರಾಮಗಳು ನೆಲಸಮಗೊಂಡಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.ಶನಿವಾರ 6.3 ತೀವ್ರತೆಯಲ್ಲಿ ಭೂಕಂಪ
ಅಪ್ಪಳಿಸಿದ್ದು, ಇದಾದ ನಂತರ ಹಲವು ಬಾರಿ ಲಘು ಭೂಕಂಪ ಸಂಭವಿಸಿದ್ದರಿಂದ ಹೆರಾತ್ನ ಪ್ರಾಂತೀಯ ರಾಜಧಾನಿಯ ನೈರುತ್ಯ ಭಾಗದಿಂದ 30 ಕಿಮೀ ದೂರವಿರುವ ಗ್ರಾಮಗಳಿಗೆ ತಲುಪಲು ರಕ್ಷಣಾ ಪಡೆಗಳು ಹರಸಾಹಸ ಪಡಬೇಕಾಯಿತು.
ಭೂಕಂಪದಲ್ಲಿ ಗಾಯಾಳುಗಳ ಸಂಖ್ಯೆ ತೀರಾ ಹೆಚ್ಚಿದೆ ಎಂದು ಹೇಳಲಾಗಿದೆ. ಶನಿವಾರ ಝಿಂದಾ ಜನ್ ಜಿಲ್ಲೆಯ ಸರ್ಬೊಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಿನ ಬಳಿ ಭೂಮಿಯು ಕಂಪಿಸಿದ್ದರಿಂದ ಹತ್ತಾರು ಮನೆಗಳು ನಾಶವಾಗಿರುವುದನ್ನು ಎಂದು ಹೇಳಲಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ 5.9 ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 1,000ಕ್ಕಿಂತ ಹೆಚ್ಚು ಮಂದಿ ಮೃತಪಟ್ಟು, ಸಹಸ್ರಾರು ಮಂದಿ ತಮ್ಮ ನಿವಾಸಗಳನ್ನು ಕಳೆದುಕೊಂಡಿದ್ದರು.