ಅರಂತೋಡು: ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ವಿರಾಜಪೇಟೆಯ ನೂತನ ಶಾಸಕರಾಗಿ ಆಯ್ಕೆಯಾದ ಎ.ಎಸ್.ಪೊನ್ನಣ ಅವರನ್ನು ಸನ್ಮಾನಿಸಲಾಯಿತು. ತೆಕ್ಕಿಲ್ ಪ್ರತಿಷ್ಠಾನದ
ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಸನ್ಮಾನ ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರತಿಷ್ಠಾನದ ನಿರ್ದೇಶಕ ಟಿ.ಎಮ್. ಶೈನ್ ತೆಕ್ಕಿಲ್ ,ಬೆಂಗಳೂರು ಫಾರ್ಮಡ್ ಗ್ರೂಪ್ ವ್ಯವಸ್ಥಾಪಕ ಹಾರಿಸ್ ತೆಕ್ಕಿಲ್,ರಾಜ್ಯ ಕಾನೂನು ಮತ್ತುಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ವಹೀದಾ ಹಾರಿಸ್ ತೆಕ್ಕಿಲ್,ತೆಕ್ಕಿಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉನೈಸ್ ಪೆರಾಜೆ,ಮುಸ್ತಫಾ ಎಂ.ಬಿ,ತಾಜುದ್ದೀನ್ ಪೆರಾಜೆ,ಸಾಬಿತ್ ಪೆರಾಜೆ,ಮೊದಲಾದವರು ಉಪಸ್ಥಿತರಿದ್ದರು .