ಸಿಡ್ನಿ: ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ 10 ವರ್ಷಗಳ ಬಳಿಕ ಭಾರತ ಬಾರ್ಡರ್– ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿದೆ.ಸರಣಿಯನ್ನು ಭಾರತ 1–3 ಅಂತರದಿಂದ ಸೋತಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ಭಾರತ ಹೊರಬಿದ್ದಿದೆ.
ಈ ಗೆಲುವಿನೊಂದಿಗೆ ಕಾಂಗರೂ ಪಡೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ಗೆ ಲಗ್ಗೆ ಇಟ್ಟಿದೆ. ಜೂನ್ನಲ್ಲಿ ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಭಾರತ ತಂಡವು ಈ ಪಂದ್ಯ ಸೋತ ನಂತರ ಪಾಯಿಂಟ್ ಪರ್ಸಂಟೇಜ್ (ಪಿಸಿಟಿ) 50ಕ್ಕೆ ಕುಸಿದೆ. ದಕ್ಷಿಣ ಆಫ್ರಿಕಾ 66.67 ಹಾಗೂ ಆಸ್ಟ್ರೇಲಿಯಾದ ಪಿಸಿಟಿಯು 63.73ಕ್ಕೇರಿದೆ.ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಭಾರತ ನೀಡಿದ 162 ರನ್ ಗುರಿಯನ್ನು ನಾಲ್ಕು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಬೆನ್ನಟ್ಟಿತು. ಆ ಮೂಲಕ 5 ಪಂದ್ಯಗಳ ಸರಣಿಯನ್ನು 3–1 ಅಂತರದಿಂದ ಆಸ್ಟ್ರೇಲಿಯಾ ಕೈವಶ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ 141 ರನ್ ಗಳಿಸಿದ್ದ ಭಾರತ ಇಂದು 157 ರನ್ಗೆ ಆಲ್ ಔಟ್ ಆಯಿತು. ಆ ಮೂಲಕ ಆಸೀಸ್ ಗೆಲುವಿಗೆ 162 ರನ್ ಗುರಿ ನೀಡಿತು.