ಕೋಲ್ಕತ್ತ:ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಮೇಲೆ ಭಾರತ ನಿಯಂತ್ರಣ ಸಾಧಿಸಿದೆ. ದಕ್ಷಿಣ ಆಫ್ರಿಕಾ ಎರಡನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನಿಂಗ್ಸ್ನಲ್ಲಿ 7 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಸಂಕಷ್ಟದಲ್ಲಿದೆ.30 ರನ್ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್ಗಳು ಭಾರತೀಯರ
ಸ್ಪಿನ್ ಬೌಲಿಂಗ್ ಎದುರಿಸಲಾಗದೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು.ರಿಯಾನ್ ರಿಕಲ್ಟನ್ (11), ಏಡಮ್ ಮಾರ್ಕರಂ (11) ಹಾಗೂ ಮಾರ್ಕೋ ಜಾನ್ಸನ್ (13) ಎರಡಂಕಿ ಗಡಿ ದಾಟಿದರು. ಸದ್ಯ, ಅಜೇಯ 29 ರನ್ ಗಳಿಸಿರುವ ನಾಯಕ ತೆಂಬಾ ಬವುಮಾ ಹಾಗೂ 1 ರನ್ ಗಳಿಸಿರುವ ಕಾರ್ಬಿನ್ ಬಾಷ್ ಕ್ರೀಸ್ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಎರಡನೇ ಇನಿಂಗ್ಸ್ನಲ್ಲಿ ಒಟ್ಟಾರೆ 63 ರನ್ಗಳ ಮುನ್ನಡೆ ಸಾಧಿಸಿದೆ.
ಭಾರತದ ಪರ ಎರಡನೇ ಇನಿಂಗ್ಸ್ ಬೌಲಿಂಗ್ನಲ್ಲಿ ಮಿಂಚಿದ ರವೀಂದ್ರ ಜಡೇಜ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್ (2) ಹಾಗೂ ಅಕ್ಷರ್ ಪಟೇಲ್ (1) ವಿಕೆಟ್ ಪಡೆದು ಮಿಂಚಿದರು.
ಭಾರತ ಕೂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 189ರನ್ಗೆ ಆಲೌಟ್ ಆಗಿತ್ತು.ದಕ್ಷಿಣ ಆಫ್ರಿಕಾ ಪರ ಸೈಮನ್ ಹಾರ್ಮರ್ 4 ವಿಕೆಟ್ ಉರುಳಿಸಿ ಭಾರತದ ಕುಸಿತಕ್ಕೆ ಕಾರಣವಾದರು. ವೇಗಿ ಮಾರ್ಕೋ ಜಾನ್ಸನ್ 3 ವಿಕೆಟ್ ಕಿತ್ತರುಭಾರತದ ಪರ ಮೊದಲ ಇನಿಂಗ್ಸ್ನಲ್ಲಿ ಕೆ.ಎಲ್. ರಾಹುಲ್ (39 ರನ್) ಗಳಿಸಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಾಷಿಂಗ್ಟನ್ ಸುಂದರ್ (29), ರಿಷಬ್ ಪಂತ್ (27) ರನ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜ (27) ರನ್ ಗಳಿಸಿ ಔಟ್ ಆದರು.





