ಕೊಲಂಬೋ: ಟಿ20 ವಿಶ್ವಕಪ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದ ಜಿಂಬಾಬ್ವೆ ತಂಡ, ಇದೀಗ ಶ್ರೀಲಂಕಾ ತಂಡವನ್ನು ಮಣಿಸಿ ಅಚ್ಚರಿ ಮೂಡಿಸಿದೆ. ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 6 ವಿಕೆಟ್ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್ಗಳಲ್ಲಿ
7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ಆ ಮೂಲಕ ಶ್ರೀಲಂಕಾ ನೀಡಿದ 179 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಜಿಂಬಾಬ್ವೆ ಅತ್ಯಂತ ಆತ್ಮವಿಶ್ವಾಸದಿಂದಲೇ ಬೆನ್ನತ್ತಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಿಂಬಾಬ್ವೆ ಆಟಗಾರರು, 19.3 ಓವರ್ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಬ್ರಿಯಾನ್ ಬೆನೆಟ್ ಅಜೇಯ 63 ರನ್ (48 ಎಸೆತ, 8 ಬೌಂಡರಿ) ಗಳಿಸಿ ತಂಡವನ್ನು ಕೊನೆಯವರೆಗೂ ಮುನ್ನಡೆಸಿದರೆ, ನಾಯಕ ಸಿಕಂದರ್ ರಾಜಾ 45 ರನ್ (26 ಎಸೆತ 2 ಬೌಂಡರಿ, 4 ಸಿಕ್ಸರ್,) ಸಿಡಿಸಿ ಜಯದ ಹಾದಿಯನ್ನು ಸುಲಭಗೊಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. ತಂಡದ ಪರ ಆರಂಭಿಕ ಬ್ಯಾಟರ್ ಪತುಮ್ ನಿಸ್ಸಾಂಕ 62 ರನ್ (41 ಎಸೆತ) ಸಿಡಿಸಿ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಪವನ್ ರತ್ನಾಮಯಕೆ ಕೇವಲ 25 ಎಸೆತಗಳಲ್ಲಿ 44 ರನ್ ಚಚ್ಚಿ ತಂಡಕ್ಕೆ ಆಸರೆಯಾದರು. ಇವರ ಬ್ಯಾಟಿಂಗ್ಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದ ಜಿಂಬಾಬ್ವೆ ಬೌಲರ್ಗಳಾದ ಗ್ರೇಮ್ ಕ್ರೆಮರ್, ಬ್ರಾಡ್ ಇವಾನ್ಸ್ ಮತ್ತು ಬ್ಲೆಸ್ಸಿಂಗ್ ಮುಜರಬಾನಿ ತಲಾ 2 ವಿಕೆಟ್ ಕಬಳಿಸಿದರು.
ಬಲಿಷ್ಠ ತಂಡಗಳಿಗೆ ಸೋಲುಣಿಸುತ್ತಿರುವ ಜಿಂಬಾಬ್ವೆ, ಈ ಟಿ20 ವಿಶ್ವಕಪ್ನಲ್ಲಿ ತಾನೊಂದು ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಎದುರಾಳಿಗಳಿಗೆ ಎಚ್ಚರಿಕೆ ನೀಡಿದೆ






