ಪಲ್ಲೇಕೆಲ್: ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪಯಣ ಲೀಗ್ ಹಂತದಲ್ಲೇ ಅಂತ್ಯಗೊಂಡಿದೆ. ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.ಐರ್ಲೆಂಡ್ ವಿರುದ್ಧ ಪಲ್ಲೇಕೆಲ್ನಲ್ಲಿ ನಡೆಯಬೇಕಿದ್ದ ಲೀಗ್ ಪಂದ್ಯ ಮಳೆಯಿಂದ ರದ್ದಾದ ಪರಿಣಾಮ ಝಿಂಬಾಬ್ವೆ ತಂಡಕ್ಕೆ
ಲಾಭವಾಗಿದ್ದು, ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವೆ ಅಂಕಗಳು ಹಂಚಿಕೆಯಾಯಿತು. ಆ ಮೂಲಕ ಝಿಂಬಾಬ್ವೆ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಿತು.ಟೂರ್ನಿಯ ಆರಂಭದಲ್ಲಿ ಬಲಿಷ್ಠ ತಂಡವೆಂದು ಪರಿಗಣಿಸಲ್ಪಟ್ಟ ಆಸ್ಟ್ರೇಲಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು, ಮಳೆಯ ಅಡ್ಡಿ ಅಂತಿಮವಾಗಿ ತಂಡದ ಮುಂದಿನ ಹಂತದ ಆಸೆಗಳಿಗೆ ತೆರೆ ಎಳೆದಿತು.
ಮತ್ತೊಂದೆಡೆ, ಲೀಗ್ ಹಂತದಲ್ಲಿ 5 ಅಂಕಗಳೊಂದಿಗೆ ಝಿಂಬಾಬ್ವೆಗೆ ಸೂಪರ್ 8ರ ಪ್ರವೇಶ ಪಡೆಯಿತು. ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡದ ವಿರುದ್ಧ ಸೋಲು ಆಸ್ಟ್ರೇಲಿಯಾಕ್ಕೆ ಭಾರೀ ಬೆಲೆ ತೆರಬೇಕಾಗಿ ಬಂತು. ಆಸ್ಟ್ರೇಲಿಯಾಕ್ಕೆ ಓಮಾನ್ ವಿರುದ್ಧ ಒಂದು ಪಂದ್ಯ ಉಳಿದಿದ್ದರೂ ಕೇವಲ ಎರಡು ಅಂಕ ಮಾತ್ರ ಇರುವ ಕಾರಣ ಅದರ ಫಲಿತಾಂಶ ಅಪ್ರಸ್ತುತವಾಯಿತು. ಬಿ ಗುಂಪಿನಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯಿತು.





