ಸುಳ್ಯ: ಆಗಸ್ಟ್ ಮೂರರಿಂದ ಬೆಂಗಳೂರಿನಿಂದ ಮೈಸೂರಿಗೆ ಭಾರತೀಯ ಜನತಾ ಪಾರ್ಟಿ ಕರ್ನಾಟಕದ ವತಿಯಿಂದ ನಡೆಯುವ ಮೈಸೂರ್ ಚಲೋ ಯಾತ್ರೆಯ ವ್ಯವಸ್ಥೆಯ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ 150ಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ಬೆಂಗಳೂರಿಗೆ ತೆರಳಿದ್ದಾರೆ. ಒಂದು ವಾರ ಕಾಲ ಯಾತ್ರೆಯ ವ್ಯವಸ್ಥೆಯ ದೃಷ್ಟಿಯಿಂದ
ಕೆಲಸ ಮಾಡಲಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಯುವ ಮೋರ್ಚಾದ ತಂಡವನ್ನು ಕರ್ನಾಟಕ ಪ್ಲೈವುಡ್ ಬಳಿ ಸ್ವಾಗತಿಸಿ ಉಪಹಾರದ ವ್ಯವಸ್ಥೆಯನ್ನು ನೀಡಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮೈಸೂರು ಚಲೋ ಯಾತ್ರೆಯ ಜಿಲ್ಲೆಯ ಸಂಚಾಲಕರಾದ ವಿಕಾಸ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಿಶೋರ್ ಬೋಟ್ಯಾಡಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಸುಳ್ಯಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಯುವ ಮೋರ್ಚಾ ಮಂಡಲದ ಅಧ್ಯಕ್ಷ ಶ್ರೀಕಾಂತ್ ಮಾವಿನ ಕಟ್ಟೆ,ಕಾರ್ಯದರ್ಶಿ ಪ್ರದೀಪ್ ಕೋಲ್ಚಾರ್, ಸುನಿಲ್ ಕೇರ್ಪಳ, ಅವಿನಾಶ್ ಕುರುಂಜಿ, ಜಗದೀಶ್ ಅರಂಬೂರು ಕರ್ನಾಟಕ ಪ್ಲೈವುಡ್ನ ಹರೀಶ್ ಕಾಮತ್ ಹೇಮಂತ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು