ರಾಜ್ಕೋಟ್: ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಸಿಡಿಲಬ್ಬರದ ಶತಕ ಹಾಗೂ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಜ್ಕೋಟ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿದೆ. ಅಜೇಯ 104 ರನ್ ಗಳಿಸಿದ ಜೈಸ್ವಾಲ್ ಗಾಯಗೊಂಡ ಕಾರಣ
ರಿಟೇರ್ಡ್ ಹರ್ಟ್ ಆಗಿ ಮರಳಿದರು.133 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ನೆರವಿನಿಂದ ಜೈಸ್ವಾಲ್ 104 ರನ್ ಗಳಿಸಿದರು.
ಶುಭುಮನ್ ಗಿಲ್ 120 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹೀತ 65 ರನ್ಗಳಿಸಿ ಆಡುತ್ತಿದ್ದಾರೆ.
ರೋಹಿತ್ ಶರ್ಮಾ 19, ಪಾಟೀದಾರ್ ಶೂನ್ಯಕ್ಕೆ ಔಟಾಗಿದ್ದಾರೆ. 126 ರನ್ ಮೊದಲ ಇನ್ನೀಂಗ್ಸ್ ಮುನ್ನಡೆ ಗಳಿಸಿದ ಭಾರತ ತಂಡ ಒಟ್ಟಾರೆ 322 ರನ್ಗಳ ಮುನ್ನಡೆ ಗಳಿಸಿದೆ. ಈ ಸರಣಿಯಲ್ಲಿನ ಜೈಸ್ವಾಲ್ ಸಿಡಿಸಿದ ಮೂರನೇ ಶತಕ ಇದಾಗಿದೆ. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದ್ದ ಆಟ್ ಮುಂದುವರಿಸಿದ ಇಂಗ್ಲೆಂಡ್ ಮೊದಲ ಇನ್ನೀಂಗ್ಸ್ 319ರನ್ಗೆ ಕೊನೆಗೊಂಡಿತು. ಮಹಮ್ಮದ್ ಸಿರಾಜ್ 4 ವಿಕೆಟ್ ಉರುಳಿಸಿದರು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 445 ರನ್ ಗಳಿಸಿತ್ತು.









