ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಟೀಮ್ ಇಂಡಿಯಾ, ಇತ್ತೀಚಿನ ವರದಿ ಬಂದಾಗ 75 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕರ್ಷಕ
ಶತಕ ಸಿಡಿಸಿದ್ದಾರೆ. 222 ಎಸೆತ ಎದುರಿಸಿದ ಜೈಸ್ವಾಲ್ 15 ಬೌಂಡರಿ, 4ಸಿಕ್ಸರ್ ನೆರವಿನಿಂದ ಅಜೇಯ 146 ರನ್ ಬಾರಿಸಿದ್ದಾರೆ. ಜೈಸ್ವಾಲ್ ಜೊತೆ 1 ರನ್ ಗಳಿಸಿದ ಅಕ್ಷರ್ ಪಟೇಲ್ ಕ್ರೀಸ್ನಲ್ಲಿದ್ದಾರೆ. ಭಾರತದ ಪರ ನಾಯಕ ರೋಹಿತ್ ಶರ್ಮ 14, ಶುಭಮನ್ ಗಿಲ್ 34, ಶ್ರೇಯಸ್ ಅಯ್ಯರ್ 27, ರಜತ್ ಪಾಟೀದಾರ್ 32 ರನ್ ಗಳಿಸಿ ಔಟಾದರಿ. ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.









