ದೇಲಂಪಾಡಿ:ದೇಲಂಪಾಡಿಯ ಕೊರೆಕ್ಕಾನ ಎಂಬಲ್ಲಿ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವತಿಯಿಂದ “ಶ್ರೀದೇವಿ ಕೌಶಿಕೆ” ಯಕ್ಷಗಾನ ತಾಳಮದ್ದಳೆ ನಡೆಯಿತು.ಹಿರಿಯ ಯಕ್ಷಗಾನ ಭಾಗವತ, ಬನಾರಿ ಕಲಾಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ನಡೆದ
ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ, ಚೆಂಡೆ, ಮದ್ದಳೆ ಚಕ್ರತಾಳ ವಾದನಗಳಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ರಾಧಾಕೃಷ್ಣ ರೈ ಮುದಿಯಾರು, ಶ್ರೀದೇವ್ ಆಚಾರ್ಯ ಈಶ್ವರಮಂಗಲ ಭಾಗವಹಿಸಿದರು.ಅರ್ಥಧಾರಿಗಳಾಗಿ ರಾಮಣ್ಣ ಮಾಸ್ತರ್ ದೇಲಂಪಾಡಿ, ಯಂ.ರಮಾನಂದ ರೈ ದೇಲಂಪಾಡಿ, ನಾರಾಯಣ ದೇಲಂಪಾಡಿ, ಬಿ.ಯಚ್.ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ, ಸಂಜೀವ ರಾವ್ ಮಯ್ಯಾಳ, ರಾಮನಾಯ್ಕ ದೇಲಂಪಾಡಿ ಭಾಗವಹಿಸಿದ್ದರು.ದೇವಿಪ್ರಸಾದ್ ಅವರ ನೂತನ ಗೃಹಪ್ರವೇಶ “ಶ್ರೀನಿಲಯ” ಕಾರ್ಯಕ್ರಮದ ಅಂಗವಾಗಿ ತಾಳಮದ್ದಳೆ ಏರ್ಪಡಿಸಲಾಗಿತ್ತು.










