ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಹಿಳಾ ಪ್ರೀಮಿಯರ್ ಲೀಗ್ನ ಪ್ಲೇ ಆಫ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಶುಕ್ರವಾರ ಐದು ರನ್ಗಳ ರೋಚಕ ಜಯ ಪಡೆದು ಮೊದಲ ಫೈನಲ್ ಪ್ರವೇಶಿಸಿತು. ಆರ್ಸಿಬಿ 20 ಓವರ್ಗಳಲ್ಲಿ
6 ವಿಕಟ್ ನಷ್ಟಕ್ಕೆ 135 ರನ್ ಗಳಿಸಿತು. 136 ರನ್ಗಳ ಗುರಿ ಎದುರಿಸಿದ್ದ ಮುಂಬೈ ಇಂಡಿಯನ್ಸ್ವ20 ಓವರುಗಳಲ್ಲಿ 6 ವಿಕೆಟ್ಗೆ 130 ರನ್ ಗಳಿಸಿತು. ನಾಟ್ ಶಿವರ್ ಬ್ರಂಟ್ 23, ಹರ್ಮನ್ಪ್ರೀತ್ ಕೌರ್ 33, ಅಮೇಲಿಯಾ ಕೆರ್ ಔಟಾಗದೇ 23 ರನ್ ಗಳಿಸಿದರು. ಆರ್ಸಿಬಿ ಪರ ಶ್ರೇಯಾಂಕ ಪಾಟೀಲ 16ಕ್ಕೆ2, ಪೆರಿ 29ಕ್ಕೆ1 ವಿಕೆಟ್ ಪಡೆದರು. ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ್ದ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರಿ 66, ಜಾರ್ಜಿಯಾ ವೇರ್ಹ್ಯಾಮ್ ಔಟಾಗದೇ 18 ರನ್ ಬಾರಿಸಿದರು. ಮುಂಬೈ ಪರ ಹೇಯ್ಲಿ ಮ್ಯಾಥ್ಯೂಸ್ 18ಕ್ಕೆ2, ನಾಟ್ ಶಿವರ್ ಬ್ರಂಟ್ 18ಕ್ಕೆ2, ಸೈಕಾ ಇಶಾಖ್ 27ಕ್ಕೆ2 ವಿಕೆಟ್ ಪಡೆದರು. ಆರ್ಸಿಬಿ ತಂಡ ಭಾನುವಾರ (ಮಾ. 17) ನಡೆಯುವ ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.









