ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ಮೂರನೇ ಬಾರಿ ರನ್ನರ್ಸ್ ಅಪ್ ಆಯಿತು.ರೋಚಕ ಫೈನಲ್ನಲ್ಲಿ ಮುಂಬೈ ತಂಡವು 8 ರನ್ಗಳಿಂದ ಡೆಲ್ಲಿ ತಂಡವನ್ನು ಸೋಲಿಸಿತು. 150 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ
141 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮರಿಝಾನ್ ಕಾಪ್ (40 ಹಾಗೂ 11ಕ್ಕೆ2) ಆಲ್ರೌಂಡ್ ಆಟ, ಜೆಮಿಮಾ ರಾಡ್ರಿಗಸ್ (30;21ಎ) ಮತ್ತು ನಿಕಿ ಪ್ರಸಾದ್ (ಅಜೇಯ 25) ಅವರ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ. ಆದರೆ ಬ್ರಂಟ್ (30 ರನ್ ಮತ್ತು 30ಕ್ಕೆ3) ಆಲ್ರೌಂಡ್ ಆಟ ಮೇಲುಗೈ ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡವು ಹರ್ಮನ್ಪ್ರೀತ್
ಕೌರ್ (66;44ಎ, 4X9, 6X2) ಮತ್ತು ಬ್ರಂಟ್ (30; 28ಎ, 4X4) ಅವರ ಆಟದ ಬಲದಿಂದ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 149 ರನ್ ಗಳಿಸಿತು. ಮುಂಬೈ ತಂಡವು 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಜಯಿಸಿತ್ತು.