ಮುಂಬೈ:ಟಿ20 ವಿಶ್ವಕಪ್ ಜಯಿಸಿ ಬಂದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು’ ಮುಂಬೈ ಅದ್ಧೂರಿಯಾಗಿ ಸ್ವಾಗತಿಸಿತು. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮಧ್ಯಾಹ್ನದಿಂದಲೇ ಜನ ಸೇರಿದ್ದರು. ಬಾರ್ಬಡೋಸ್ನಿಂದ ಬುಧವಾರ ಪ್ರಯಾಣ ಆರಂಭಿಸಿದ್ದ ತಂಡವು
ಗುರುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಔತಣ ಸ್ವೀಕರಿಸಿದ ನಂತರದ ಮುಂಬೈಗೆ ತಂಡವು ಬಂದಿತು. ಸುರಿಯುವ ಮಳೆಯನ್ನು ಲೆಕ್ಕಿಸದ ಜನ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ನಾರಿಮಾನ್ ಪಾಯಿಂಟ್ ಬಳಿಯಿಂದ ವಾಂಖೆಡೆ ಸ್ಟೇಡಿಯಂ ತನಕ ಅದ್ದೂರಿ ವಿಜಯೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ತೆರೆದ ಬಸ್ನಲ್ಲಿ ಆಟಗಾರರು ಸಂಭ್ರಮದಲ್ಲಿ ಆಗಮಿಸಿದರು. ವಾಂಖೆಡೆ ಸ್ಟೇಡಿಯಂನಲ್ಲಿ ಅದ್ದೂರಿ ಸನ್ಮಾನ ಸಮಾರಂಭ ನಡೆಯಿತು. ಬಿಸಿಸಿಐ ಘೋಷಿಸಿದ 125 ಕೋಟಿಯ ಬಹುಮಾನ ತಂಡಕ್ಕೆ ಹಸ್ತಾಂತರ ಮಾಡಲಾಯಿತು.