ನವಿ ಮುಂಬೈ: ಸ್ಪಿನ್ನರ್ ದೀಪ್ತಿ ಶರ್ಮಾ ಬೌಲಿಂಗ್ ದಾಳಿಗೆ ಕುಸಿದ ಇಂಗ್ಲೆಂಡ್ ತಂಡ ಮಹಿಳಾ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ದಿನ 136 ರನ್ಗಳಿಗೆ ಆಲೌಟ್ ಆಯಿತು. 5 ವಿಕೆಟ್ ಪಡೆಸ ದೀಪ್ತಿ ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು ಅಲ್ಪ ಮೊತ್ತಕ್ಕೆ ಕುಸಿಯಿತು. ಭಾರತದ ಪರ ದೀಪ್ತಿ (67) ಅರ್ಧಶತಕ ಗಳಿಸಿದ್ದರು. ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 428 ರನ್ ಗಳಿಸಿದ್ದರು. ಮೊತ್ತಕ್ಕೆ ಪ್ರತ್ಯುತ್ತರ ನೀಡುವಲ್ಲಿ
ಹೀಥರ್ ನೈಟ್ ಬಳಗವು ಎಡವಿವ292 ರನ್ಗಳ ಹಿನ್ನಡೆ ಅನುಭವಿಸಿತು. ನಥಾಲಿ ಶಿವರ್ ಬ್ರಂಟ್ (59; 70ಎ) ಅವರೊಬ್ಬರು ಮಾತ್ರ ಅರ್ಧಶತಕ ಗಳಿಸಿದರು.ಫಾಲೋಆನ್ ಹೇರುವ ಅವಕಾಶ ಆತಿಥೇಯ ತಂಡಕ್ಕೆ ಇತ್ತು. ಆದರೂ ಎರಡನೇ ಇನಿಂಗ್ಸ್ ಆಡಲು ನಿರ್ಧರಿಸಿದ ಹರ್ಮನ್ಪ್ರೀತ್ ಕೌರ್ ಬಳಗವು ದಿನದಾಟದ ಮುಕ್ತಾಯಕ್ಕೆ 42 ಓವರ್ಗಳಲ್ಲಿ 6 ವಿಕೆಟ್ಗಳಿಗೆ 186 ರನ್ ಗಳಿಸಿದೆ. ನಾಯಕಿ ಹರ್ಮನ್ಪ್ರೀತ್ (ಬ್ಯಾಟಿಂಗ್ 44; 67ಎ) ಮತ್ತು ಪೂಜಾ (ಬ್ಯಾಟಿಂಗ್ 17) ಕ್ರೀಸ್ನಲ್ಲಿದ್ದಾರೆ. ಒಟ್ಟು 478 ರನ್ಗಳ ಭಾರಿ ಮುನ್ನಡೆ ಸಾಧಿಸಿದೆ. ಶಾರ್ಲೊಟ್ ಡೀನ್ ನಾಲ್ಕು ವಿಕೆಟ್ ಗಳಿಸಿದರು.
ಭಾರತ ಮೊದಲ ಇನಿಂಗ್ಸ್: 104.3 ಓವರ್ಗಳಲ್ಲಿ 428 (ದೀಪ್ತಿ ಶರ್ಮಾ 67, ಪೂಜಾ ವಸ್ತ್ರಕರ್ ಔಟಾಗದೆ 10, ಲಾರೆನ್ ಬೆಲ್ 67ಕ್ಕೆ3, ಸೋಫಿ ಎಕ್ಸೆಲೆಸ್ಟೋನ್ 91ಕ್ಕೆ3)
ಇಂಗ್ಲೆಂಡ್: 35.3 ಓವರ್ಗಳಲ್ಲಿ 136 (ನಥಾಲಿಯ ಸೀವರ್ ಬ್ರಂಟ್ 59, ಡೇನಿಲ್ ವೈಟ್ 19, ಸ್ನೇಹಾ ರಾಣಾ 25ಕ್ಕೆ2, ದೀಪ್ತಿ ಶರ್ಮಾ 7ಕ್ಕೆ5)
ಎರಡನೇ ಇನಿಂಗ್ಸ್: ಭಾರತ : 42 ಓವರ್ಗಳಲ್ಲಿ 6 ವಿಕೆಟ್ಗಳಿಗೆ 186 (ಶಫಾಲಿ ವರ್ಮಾ 33, ಸ್ಮೃತಿ ಮಂದಾನ 26, ಜೆಮಿಮಾ ರಾಡ್ರಿಗಸ್ 27, ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ 44, ದೀಪ್ತಿ ಶರ್ಮಾ 20, ಪೂಜಾ ವಸ್ತ್ರಕರ್ ಬ್ಯಾಟಿಂಗ್ 17, ಶಾರ್ಲೊಟ್ಡೀನ್ 68ಕ್ಕೆ4, ಸೋಫಿ ಎಕ್ಸೆಲ್ಸ್ಟೋನ್ 76ಕ್ಕೆ2)











