ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 347 ರನ್ ಅಂತರದ ಜಯ ದಾಖಲಿಸಿದೆ.
ಭಾರತ ಮೊದಲ ಇನಿಂಗ್ಸ್ನಲ್ಲಿ 428 ರನ್ ಗಳಿಸಿ ಆಲೌಟ್ ಆಯಿತು. ಈ ಮೊತ್ತದೆದುರು ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 136 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.292 ರನ್ಗಳ ಭಾರಿ
ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 6 ವಿಕೆಟ್ಗೆ 186 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅದರೊಂದಿಗೆ ಪ್ರವಾಸಿ ಪಡೆಗೆ 479 ರನ್ಗಳ ಬೃಹತ್ ಗುರಿ ನೀಡಿತು. ಕಠಿಣ ಗುರಿ ಎದುರು ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ಆಂಗ್ಲರು, ನಿರಂತರವಾಗಿ ವಿಕೆಟ್ ಕಳೆದುಕೊಂಡು ಕೇವಲ 131 ರನ್ ಆಗುವಷ್ಟರಲ್ಲೇ ಕುಸಿದು ಸೋಲೊಪ್ಪಿಕೊಂಡರು.
ದೀಪ್ತಿ 4 ವಿಕೆಟ್ ಪಡೆದರು. ಪೂಜಾ ಮೂರು ವಿಕೆಟ್ ಪಡೆದರು. ರಾಜೇಶ್ವರಿ ಗಾಯಕವಾಡ್ 2ಮತ್ತು ರೇಣುಕಾ ಸಿಂಗ್ 1 ಉರುಳಿಸಿದರು.












