ಸುಳ್ಯ:ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಆಸ್ಪತ್ರೆಯ ಭೇಟಿ ಸಂದರ್ಭ ಹೊರ ರೋಗಿಯಾಗಿ ಔಷಧಿಗೆ ಬಂದ ಮಹಳೆಯರನ್ನು ಹಾಗೂ ಹಾಗೂ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಲವು ಮಹಿಳೆಯರನ್ನು ಮಾತನಾಡಿಸಿದ ಅವರು ಆರೋಗ್ಯ ವಿಚಾರಿಸಿದರು. ಮಾತಿನ ಮಧ್ಯೆ
ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹ ಜ್ಯೋತಿ ಸಿಗ್ತಾ ಇದೆಯಾ, ಎರಡು ಸಾವಿರ ಹಣ ಬರ್ತಾ ಇದೆಯಾ, ಎರಡು ಸಾವಿರ ಹಣ ಬಂದರೆ ಏನು ಮಾಡುತ್ತೀರಿ ಎಂದು ಕೇಳಿದರು. ಗೃಹ ಲಕ್ಷ್ಮಿಯ ಎರಡು ಸಾವಿರ ರೂ ಬರುವ ಕಾರಣ ಔಷಧಿ ಪಡೆದುಕೊಳ್ಳಲು, ಮತ್ತಿತರ ಜೀವನದ ದೈನಂದಿನ ಅಗತ್ಯತೆಗಳಿಗೆ ಸಹಾಯಕ ಆಗುತಿದೆ. ಶಕ್ತಿ ಯೋಜನೆಯಿಂದ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಕಣ್ಣೀರು ಒರೆಸುತ್ತಿದರುವ ಡಾ.ನಾಗಲಕ್ಷ್ಮಿ ಚೌಧರಿ
ಬಡವರಿಗೆ ಓಡಾಟಕ್ಕೆ ಅನುಕೂಲ ಆಗಿದೆ. ಗೃಹ ಜ್ಯೋತಿಯಿಂದ ಉಚಿತ ವಿದ್ಯುತ್ ಹೀಗೆ ಬಡವರಿಗೆ ತುಂಬಾ ಅನುಕೂಲ ಆಗಿದೆ. ಗ್ಯಾರಂಟಿ ಯೋಜನೆಗಳು ಬದುಕಿಗೆ ಆಸರೆಯಾಗಿದೆ ಎಂದು ಹೇಳಿ ಮಹಿಳೆಯರು ಕಣ್ಣೀರಾದರು. ಆಗ ಅವರ ಕಣ್ಣೀರು ಒರೆಸಿ, ಆಲಿಂಗಸಿ ಅಧ್ಯಕ್ಷರು ಸಂತೈಸಿದರು. ತಮ್ಮ ಅನಾರೋಗ್ಯದ ಬಗ್ಗೆ ಮಹಿಳೆಯೊಬ್ಬರು ಕಣ್ಣೀರು ಸುರಿಸಿದಾಗ ಅವರ ಕಣ್ಣೀರು ಒರೆಸಿ, ತಬ್ಬಿಕೊಂಡು ಸಂತೈಸಿದರು. ಆಸ್ಪತ್ರೆಯ ವ್ಯವಸ್ಥೆ, ಸೇವೆಗಳ ಬಗ್ಗೆಯೂ ರೋಗಿಗಳು ಉತ್ತಮ
ಆಸ್ಪತ್ರೆಯಲ್ಲಿ ಮಹಿಳೆಯೋರ್ವರನ್ನು ತಬ್ಬಿಕೊಂಡು ಸಂತೈಸುತ್ತಿರುವ ಡಾ.ನಾಗಲಕ್ಷ್ಮಿ ಚೌಧರಿ
ಮೆಚ್ಚುಗೆಯ ಮಾತುಗಳನ್ನಾಡಿ, ಆನಂದ ಬಾಷ್ಪ ಸುರಿಸಿದರು.
ಸರಕಾರದ ಯೋಜನೆಗಳು ಜನರನ್ನು ಮುಟ್ಟುತಿದೆ, ಅವರಿಗೆ ಅನುಕೂಲ ಆಗುತಿದೆ ಎಂಬುದಕ್ಕೆ ಜನರ ಈ ಭಾವನೆಗಳೇ ಸಾಕ್ಷಿ ಎಂದು ಡಾ.ನಾಗಲಕ್ಷ್ಮಿ ಚೌಧರಿ ಈ ಕುರಿತು ಪ್ರತಿಕ್ರಿಯೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ವಿ.ಕರುಣಾಕರ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಪ್ರಹ್ಲಾದ್ ಬೆಳ್ಳಿಪ್ಪಾಡಿ,ಪೊಲೀಸ್ ಉಪನಿರೀಕ್ಷಕಿ ಸರಸ್ವತಿ ಹಾಗೂ ಸಿಬ್ಬಂದಿಗಳು, ಸರಕಾರಿ ಆಸ್ಪತ್ರೆಯ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.