ಬೆಂಗಳೂರು:ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ಗೆ ಸ್ವಾಗತ ಕೋರಿದ ಚಂದ್ರಯಾನ–2 ಆರ್ಬಿಟರ್ ಶುಭಾಶಯ ವಿನಿಮಯ ಮಾಡಿದೆ ‘ಸ್ವಾಗತ ಗೆಳೆಯ!’ ಎಂದು ಚಂದ್ರಯಾನ–3ರ ‘ಲ್ಯಾಂಡರ್’ಗೆ ಆತ್ಮೀಯವಾಗಿ ಚಂದ್ರಯಾನ–2ರ ಆರ್ಬಿಟರ್ ಸ್ವಾಗತ ಕೋರಿದೆ. ಎರಡೂ ಪರಸ್ಪರ
ಶುಭಾಶಯ ವಿನಿಯಮ ಮಾಡಿಕೊಂಡಿವೆ ಎಂದು ಇಸ್ರೊ ಮಾಹಿತಿ ನೀಡಿದೆ. ಚಂದ್ರನ ಅಂಗಳ ಸ್ಪರ್ಶಕ್ಕೆ ತಾಲೀಮು ನಡೆಸುತ್ತಿರುವಾಗಲೇ ಲ್ಯಾಂಡರ್ ಅನ್ನು ಆರ್ಬಿಟರ್ ಆತ್ಮೀಯತೆಯಿಂದ ಸ್ವಾಗತಿಸಿದೆ.
ಬುಧವಾರ ಸಂಜೆ 6.04 ಕ್ಕೆ ಲ್ಯಾಂಡರ್ ಚಂದ್ರನ ನೆಲಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.
2019 ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ–2 ರ ಅರ್ಬಿಟರ್ ಇನ್ನೂ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ. ಆರ್ಬಿಟರ್ ಮತ್ತು ಲ್ಯಾಂಡರ್ ಎರಡೂ ಐಡಿಎಸ್ಎನ್ಗೆ ಸಂವಹನ ನಡೆಸುತ್ತವೆ.