ಸುಳ್ಯ:ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು, ಸುಳ್ಯದ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಎಸೋಸಿಯೇಶನ್ ಹಾಗೂ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸಂಘಟನಾ ವತಿಯಿಂದ ಕರ್ನಾಟಕ ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಸುಳ್ಯದ ಜೂನಿಯಲ್ ಕಾಲೇಜು ಮೈದಾನದಲ್ಲಿ ನಡೆಯುತಿದೆ.
ನಿನ್ನೆ ನಡೆದ ಸ್ಪರ್ಧೆಗಳ ಫಲಿತಾಂಶ ಇಲ್ಲಿದೆ.
44 ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪಲ್ಲವಿ ಪ್ರಥಮ, ಉಜಿರೆ ಎಸ್ಡಿಎಂ ಸ್ಪೋರ್ಟ್ಸ ಕ್ಲಬ್ನ ನಿಶಿಕಾ ದ್ವಿತೀಯಾ, ಉಡುಪಿಯ
ಅನ್ವಿತಾ ತೃತೀಯ, ೪೮ ಕೆಜಿ. ಮಹಿಳಾ ವಿಭಾಗದಲ್ಲಿ ಉಜಿರೆ ಎಸ್ಡಿಎಂ ಸ್ಪೋರ್ಸ್ ಕ್ಲಬ್ನ ಹರ್ಷಿತಾ ಪಿ.ಪಿ. ಪ್ರಥಮ, ಆಳ್ವಾಸ್ ಏಕಲವ್ಯದ ಸಂಜನಾ ದ್ವಿತೀಯ, ಉಡುಪಿ ಜಿಲ್ಲೆಯ ಧನ್ಯಶ್ರೀ ತೃತೀಯ, ಜೂನಿಯರ್ ೪೮ ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಮೂಡುಬಿದಿರೆ ಕಾಲೇಜಿನ ಶ್ರಾವ್ಯ ಪ್ರಥಮ, ಉಜಿರೆ ಎಸ್ಡಿಎಂ ಸ್ಪೋರ್ಸ್ ಕ್ಲಬ್ನ ಹರ್ಷಿತಾ ಪಿ.ಪಿ. ದ್ವಿತೀಯ, ಸೀನಿಯರ್ ೪೮ ಕೆ.ಜಿ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಶ್ರಾವ್ಯ ಪ್ರಥಮ, ಡಿವೈಇಎಸ್ ಪಲ್ಲವಿ ಎಲ್ ದ್ವಿತೀಯ, ಉಜಿರೆ ಎಸ್ಡಿಎಂ ಸ್ಪೋರ್ಸ್ ಕ್ಲಬ್ನ ಹರ್ಷಿತಾ ಪಿ.ಪಿ. ತೃತೀಯ.
ಯೂತ್ ೫೬ ಕೆಜಿ. ಪುರುಷರ ವಿಭಾಗದಲ್ಲಿ ಡಿವೈಇಎಸ್ ಬೆಳಗಾವಿ ರೋಣಿತ್ ಕೃಷ್ಣ ಮುರಕಟೆ ಪ್ರಥಮ, ದಾವಣಗೆರೆ ಕುಮಾರ್ ಬೆಲೂರ್ ದ್ವಿತೀಯ, ದಾವಣಗೆರೆ ಗಣೇಶ್ ಬಿ. ತೃತೀಯ, ಯೂತ್ ೬೦ ಕೆಜಿ ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರವಿ ಸಿದ್ದಪ್ಪ ಪ್ರಥಮ, ಮಂಗಳ ಥ್ರೋವರ್ಸ್ನ ಪ್ರಜ್ವಲ್ ದ್ವಿತೀಯ,ಮೂಡುಬಿದಿರೆ ಜೃನ್ ಪಿಯುಸಿಯ ರಂಜನ್ ಆರ್.ಕೆ. ತೃತೀಯ.
ಜೂನಿಯರ್ ೬೦ ಕೆ.ಜಿ. ಪುರುಷರ ವಿಭಾಗದಲ್ಲಿ ಡಿವೈಇಎಸ್ ಯಶ್ವಂತ್.ಎಂ ಪ್ರಥಮ, ಸಂಜೀವ ಶೆಟ್ಟಿ ಸ್ಪೋರ್ಟ್ಸ್ ಹೇಮದ್ರಿ ಬಿ. ದ್ವಿತೀಯ, ಆಳ್ವಾಸ್ ಏಕಲವ್ಯ ಮಧುಲಿಂಗ್ ತೃತೀಯ, ಸೀನಿಯರ್ ೬೦ ಕೆಜಿ. ಪುರುಷರ ವಿಭಾಗದಲ್ಲಿ ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ನ ಸುಬ್ರಹ್ಮಣ್ಯ ಪ್ರಥಮ, ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಶಾಂತ್ ದ್ವಿತೀಯ, ಉಜಿರೆ ಸ್ಪೋರ್ಟ್ಸ್ ಕ್ಲಬ್ನ ಕವನ್ ಕೆ. ತೃತೀಯ, ಯೂತ್ ೬೫ ಕೆಜಿ ಪುರುಷರ ವಿಭಾಗದಲ್ಲಿ ದಾವಣಗೆರೆ ಗಣೇಶ್ ವಿ. ಪ್ರಥಮ, ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ನ ಸೂರ್ಯಪ್ರಕಾಶ್ ದ್ವಿತೀಯ, ದಾವಣಗೆರೆ ಪವನ್ ಎಚ್. ತೃತೀಯ.
ಜೂನಿಯರ್ ೬೫ ಕೆಜಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆಯ ಕೆಂಚಪ್ಪ ಗದ್ದಿ ಪ್ರಥಮ, ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆಯ ಸೂರ್ಯಪ್ರಕಾಶ್ ದ್ವಿತೀಯ, ದಾವಣಗೆರೆಯ ಮಂಜುನಾಥ್ ತೃತೀಯ, ಸೀನಿಯರ್ ೬೫ ಕೆಜಿ ಪುರುಷರ ವಿಭಾಗದಲ್ಲಿ ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆಯ ತಿಪ್ಪಣ್ಣ ಲಕ್ಕಣ್ಣನವರ್ ಪ್ರಥಮ, ಡಿವೈಇಎಸ್ ಯೋಗೀಶ್ ನಾಯಕ್ ಕೆ. ದ್ವಿತೀಯ, ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆಯ ಮನೋಜ್. ಬಿ.ಆರ್. ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಯೂತ್ 53 ಕೆಜಿ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಏಕಲವ್ಯ ಇದರ ದೀಪಿಕಾ ಕುರಗೋಡು ಪ್ರಥಮ ,ಆಳ್ವಾಸ್ ಕಾಲೇಜಿನ ಮೈತ್ರಿ ರೆಳೆಕ್ಕಾರ ದ್ವಿತೀಯ , ಸ್ಪೋರ್ಟ್ಸ್ ಎಂಡ್ ಆರ್ಟ್ಸ್ ಎಸೋಶಿಯನ್ನ ದೀಕ್ಷಾ ಆರ್ ಶೆಟ್ಟಿ ತೃತೀಯ. ಜೂನಿಯರ್ 53 ಕೆಜಿ ಮಹಿಳಾ ವಿಭಾಗದಲ್ಲಿ ಇವೈಇಎಸ್ ಇವಾಂಜಿಲಿನ್ ಆರ್ ಪ್ರಥಮ. ಉಜಿರೆ ಎಸ್ ಡಿ ಎಂ ಸ್ಪೋರ್ಟ್ಸ್ ಕ್ಲಬ್ನ ಅಮೃತ ಎಸ್ ಆರ್ ದ್ವಿತೀಯ , ಸೆಂಟ್ ಫಿಲೋಮಿನದ ದೃಷ್ಯ ಕೆ ವಿ ತೃತೀಯ. ಸೀನಿಯರ್ 53 ಕೆಜಿ ಮಹಿಳಾ ವಿಭಾಗದಲ್ಲಿ ಸಂಜಿವಿ ಶೆಟ್ಟಿ ಸ್ಪೋರ್ಟ್ಸ್ ಲಕ್ಷ್ಮಿ ವಿ ಪ್ರಥಮ , ಸಂಜಿವಿ ಶೆಟ್ಟಿ ಸ್ಪೋರ್ಟ್ಸ್ ಪೂಜೀತಂ ಆರ್ ದ್ವಿತೀಯ,ಡಿವೈಇಎಸ್
ಇವಾಂಜಿಲಿನ್ ಆರ್ ತೃತೀಯ.
ಯೂತ್ 71 ಕೆಜಿ ಪುರುಷ ವಿಭಾಗದಲ್ಲಿ ಸೆಂಟ್ ಫಿಲೋಮಿನದ ದಿಶಾಂನ್ ಎಂ. ಪ್ರಥಮ, ಮಂಗಳ ಥ್ರೋವೆಬ್ಸ್ ಎಸಿ ಇದರ ರಿತೇಶ್ ದ್ವಿತೀಯ. ಡಿಸಿಸಿ ಮಂಗಳೂರು ನಿಖಿಲ್ ಎನ್ ಡಿ ತೃತೀಯ. ಜೂನಿಯರ್ 71 ಕೆಜಿ ಪುರುಷರ ವಿಭಾಗ ಡಿ ವೈ ಇ ಎಸ್ ಬೆಳಗಾವಿ ಇದರ ಸಿ ಶಿವಮಣಿ ಚದಾನಂದಪಿ ಪ್ರಥಮ , ಸಂಜೀವಿ ಶೆಟ್ಟಿ ಸ್ಪೋರ್ಟ್ಸ್ ಇದರ ದೇವೇಂದ್ರ ಆರ್ ದ್ವಿತೀಯ , ಉಜಿರೆ ಎಸ್ ಡಿ ಎಂ ಸ್ಪೋರ್ಟ್ಸ್ ಕ್ಲಬ್ ಪವನ್ ಕುಮಾರ್ ತೃತೀಯ , ಸೀನಿಯರ್ 71 ಕೆಜಿ ಪುರುಷರ ವಿಭಾಗ ಉಡುಪಿ ಜಿಲ್ಲೆಯ ಮಂಜುನಾಥ್ ಮರಾಠಿ ಪ್ರಥಮ , ಮೂಡಿಬಿದ್ರೆ ಆಳ್ವಾಸ್ ಕಾಲೇಜು ಚಿರಂಜೀವಿ ದ್ವಿತೀಯ , ದಾವಣಗೆರೆಯ ಕೃಷ್ಣ ಎಸ್ ತೃತೀಯ ಸ್ಥಾನ ಪಡೆದಿದ್ದಾರೆ.












