ತಿರುವನಂತಪುರ: ಭಾರತದ ಟಿ20 ವಿಶ್ವಕಪ್ ಗೆಲುವಿನ ರೂವಾರಿ ಕೇರಳೀಯ ಸಂಜು ಸ್ಯಾಮ್ಸನ್ ತವರೂರು ಕೇರಳಕ್ಕೆ ಆಗಮಿಸಿದ ಸಂದರ್ಭ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರಕಾರ ಮತ್ತು ಕೇರಳ ಕ್ರಿಕೆಟ್ ಅಸೋಸಿಯೇಷನ್ ಅದ್ದೂರಿ ಅಭಿಮಾನದ ಸ್ವಾಗತ ನೀಡಿದರು. ರಾಜ್ಯ ಸರಕಾರದ ಪರವಾಗಿ
ಶಿಕ್ಷಣ ಸಚಿವ ಶಿವನ್ ಕುಟ್ಟಿ ವಿಮಾನ ನಿಲ್ದಾಣಕ್ಕೆ ತೆರಳಿ ಸಂಜುವನ್ನು ಬರಮಾಡಿಕೊಂಡರು. ವಿಮಾನ ನಿಲ್ದಾಣ ಪರಿಸರಕ್ಕೆ ಭಾರೀ ಸಂಖ್ಯೆಯ ಸಂಜು ಅಭಿಮಾನಿಗಳು ಆಗಮಿಸಿದ್ದರು. ಚೇಟಾ. ಚೇಟಾ ಎಂಬ ಮುಗಿಲು ಮುಟ್ಟುವ ಕರೆಯೊಂದಿಗೆ ಅವರು ಸಂಭ್ರಮಿಸಿದರು.
ವಿಶ್ವಕಪ್ ನ ಆರಂಭಿಕ ಪಂದ್ಯಗಳಲ್ಲಿ ಆವಕಾಶ ವಂಚಿತನಾಗಿದ್ದ ಸಂಜು ಅಂತಿಮ ಮೂರು ಪಂದ್ಯಗಳಲ್ಲಿ ಸಿಡಿಲಮರಿಯಂತೆ ಮೆರೆದು ಭಾರತವನ್ನು ವಿಶ್ವ ವಿಜೇತವಿಗಿಸುವಲ್ಲಿ ನಿರ್ಣಾಯಕ ಕೊಡುಗೆ ನೀಡಿದ್ದರು.ಭಾರತದ ಸಿರಿಮುಡಿಗೆ ವಿಶ್ವವಿಜೇತ ಕಿರೀಟ ತೊಡಿಸಿ, ಟೂರ್ನ್ ಮೆಂಟಿನ ಸರಣಿ ಶ್ರೇಷ್ಟ ಸಂಜು ಸ್ಯಾಂಸನ್ ಗೆ ಕೇರಳ ರಾಜ್ಯ ಸರಕಾರದ ವತಿಯಿಂದ ಬೃಹತ್ ಅಭಿನಂದನಾ ಕಾರ್ಯಕ್ರಮ ತೀರ್ಮಾನಿಸಿದೆ. ತಿರುವನಂತಪುರದಲ್ಲಿ ಏರ್ಪಡಿಸುವ ಸಮಾರಂಭದಲ್ಲಿ ಸಂಜು ಸ್ಯಾಂಮ್ಸನ್ಗೆ ರಾಜ್ಯದ ಗೌರವ ಸಲ್ಲಿಸಲಾಗುವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಘೋಷಿಸಿದ್ದಾರೆ.ಹುಟ್ಟೂರು ವಿಯಿಂಞನಲ್ಲಿಯೂ ಅದ್ದೂರಿ ಸ್ವಾಗತ ನೀಡಲಾಯಿತು.









