ಸುಳ್ಯ: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾಯುಜಿತ್ ರೇಸಿಂಗ್ 8.0 ಗೋ-ಕಾರ್ಟ್ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ ಮತ್ತು
ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ ವಾಯುಜಿತ್ ರೇಸಿಂಗ್ ಗೋ-ಕಾರ್ಟ್ ಅನಾವರಣಗೊಳಿಸಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಘವೇಂದ್ರ ಬಿ. ಕಾಮತ್ ಮಾತನಾಡಿದರು.

ಕೊಯಂಬತೂರ್ನಲ್ಲಿ ನಡೆಯುವ ಗೋ-ಕಾರ್ಟ್ ಡಿಸೈನ್ ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ತಂಡದ ಕ್ಯಾಪ್ಟನ್ ದಿವಿನ್ ಕುಮಾರ್ ವಾಯುಜಿತ್ ರೇಸಿಂಗ್ನ ಪ್ರೇರಕ ಪ್ರಯಾಣವನ್ನು ವಿವರಿಸಿದರು. ವಿದ್ಯಾರ್ಥಿನಿ ಸಾಕ್ಷಿ ಶೆಟ್ಟಿ ತಂಡದ ವಿವರಗಳನ್ನು ನೀಡಿದರು. ವಿದ್ಯಾರ್ಥಿ ಮನೋಜ್ ಕುಮಾರ್ ವಿ. ಸ್ವಾಗತಿಸಿ, ಧನ್ಯಶ್ರೀ ಎಂ.ಎಸ್. ವಂದಿಸಿದರು. ವಿದ್ಯಾರ್ಥಿನಿ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.




