ಸುಳ್ಯ; ದ.ಕ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ
ಶ್ರದ್ಧಾಂಜಲಿ ಸಭೆ ನಡೆಯಿತು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ನುಡಿ ನಮನ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ, ಉಪಾಧ್ಯಕ್ಷ ಕೆ.ಗೋಕುಲದಾಸ್ ನುಡಿನಮನ ಸಲ್ಲಿಸಿದರು. ದಿನೇಶ್ ಅಂಬೇಕಲ್ಲು , ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ್, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್, ಧೀರಾ ಕ್ರಾಸ್ತಾ, ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯರಾದ ಸಿದ್ಧೀಕ್ ಕೊಕ್ಕೊ, ರಾಜು ಪಂಡಿತ್ ಎನ್ ಎಸ್ ಯು ಐ ಅಧ್ಯಕ್ಷರಾದ ಧನುಷ್ ಕುಕ್ಕೆಟ್ಟಿ ಮೊದಲಾದವರಿದ್ದರು.