ವಾಲ್ತಾಜೆ: ದೇವಚಳ್ಳ ಗ್ರಾಮದ ವಾಲ್ತಾಜೆಯ ಮೂರು ಕಡೆಗಳಲ್ಲಿ ಒಟ್ಟು ನೂರು ಮೀಟರ್ ಗಳ ವಾಲ್ತಾಜೆ ಉಳ್ಳಾಕಳು ರಸ್ತೆಯ ಕಾಂಕ್ರೀಟ್ ಕಾಮಗಾರಿ ಗ್ರಾಮಪಂಚಾಯತ್ ಹಾಗೂ ವಿಶೇಷ ಅನುದಾನದೊಂದಿಗೆ ಪೂರ್ಣಗೊಂಡಿದೆ. ಇದರ ಉದ್ಘಾಟನೆ ನಡೆಯಿತು. ವಿವಿಧ ರಸ್ತೆ ಕಾಮಗಾರಿಗಳ
ಉದ್ಘಾಟನೆಗಳನ್ನು ಗ್ರಾಮದ ಹಿರಿಯರಾದ ಧರ್ಮಾವತಿ ಮುಂಡೋಡಿ, ಮಹಾಬಲ ಮುಂಡೋಡಿ, ಶಾರದ ವಾಲ್ತಾಜೆ ಯವರು ನೆರವೇರಿಸಿದರು. ಕಂದ್ರಪ್ಪಾಡಿ ರಾಜ್ಯದೈವ ಪರುಷದೈವದ ಆಡಳಿತ ಮುಕ್ತೇಸರರಾದ ಕಾಳಿಕಪ್ರಸಾದ್ ಮುಂಡೋಡಿ ದೀಪ ಬೆಳಗಿ ಶುಭಹಾರೈಸಿದರು. ಪ್ರವೀಣ್ ಮುಂಡೋಡಿ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅನುದಾನ ಮತ್ತು ಕಾಮಗಾರಿಯ ಕುರಿತು ಮಾಹಿತಿ ನೀಡಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ, ಅಶೋಕ್ ವಾಲ್ತಾಜೆ, ರಸ್ತೆ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತಿತರಿದ್ದರು.