ಸುಳ್ಯ: ಸುಳ್ಯದ ಹಿರಿಯ ಉದ್ಯಮಿ, ಉಪೇಂದ್ರ ಕಾಮತ್(90) ಅವರು ನಿಧನರಾಗಿದ್ದಾರೆ. ವಯೋಸಹಜ ಅಸೌಖ್ಯದಿಂದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಇಂದು ವಿನೋಬ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. 1970ರ ದಶಕದಲ್ಲಿ
ಕಾಸರಗೋಡಿನಿಂದ ಸುಳ್ಯಕ್ಕೆ ಆಗಮಿಸಿದ ಅವರು ಸುಳ್ಯದಲ್ಲಿ ಉದ್ಯಮಗಳನ್ನು ಸ್ಥಾಪಿಸಿದರು.
ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿ ಗುರುತಿಸಿಕೊಂಡಿದ್ದ ಅವರು ಸುಳ್ಯದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದರು.
ಜಾಲ್ಸೂರು ಅಡ್ಕಾರಿನ ಕ್ಯಾಶ್ಯೂ ಫ್ಯಾಕ್ಟರಿ ಮಾಲಕರಾದ ಅವರು ಜಾಲ್ಸೂರು ಮಂಡಲ ಪಂಚಾಯತ್ನ ಪ್ರಧಾನರಾಗಿ ಸೇವೆ ಸಲ್ಲಿಸಿದ್ದಾರೆ., ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು.
ಮೃತರು ಪತ್ನಿ ಪದ್ಮಾವತಿ ಕಾಮತ್, ಪುತ್ರ ಸುಧಾಕರ ಕಾಮತ್, ಸೊಸೆ, ಮೊಮ್ಮಕ್ಕಳನ್ನು, ಬಂಧುಗಳನ್ನು ಅಗಲಿದ್ದಾರೆ.