ನವದೆಹಲಿ: 18ನೇ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದು, ಆದಾಯದಲ್ಲಿ ಶೇ 27ರಷ್ಟನ್ನು ಸಾಲದಿಂದ ಪಡೆಯುವುದಾಗಿ ಹಾಗೂ ಖರ್ಚಿನಲ್ಲಿ ಶೇ 19ರಷ್ಟನ್ನು ಸಾಲಕ್ಕೆ ಹೊಂದಿಸುವುದಾಗಿ ಹೇಳಿದ್ದಾರೆ.
ಉಳಿದಂತೆ ಆದಾಯ ತೆರಿಗೆಯಿಂದ ಬರುವ ಆದಾಯ ಶೇ 19ರಷ್ಟು, ಜಿಎಸ್ಟಿ ಹಾಗೂ ಇತರ ತೆರಿಗೆಗಳಿಂದ ಶೇ 18, ಕಾರ್ಪೊರೇಷನ್ ತೆರಿಗೆಯಿಂದ ಶೇ 17, ತೆರಿಗೆಯೇತರ ಆದಾಯ ಮೂಲಗಳಿಂದ ಶೇ 9, ಕೇಂದ್ರ ಅಬಕಾರಿ ಸುಂಕದಿಂದ ಶೇ 5, ಅಬಕಾರಿಯಿಂದ ಶೇ 4 ಹಾಗೂ
ನಾನ್ ಡೆಬ್ಟ್ನಿಂದ ಶೇ 1ರಷ್ಟು ಆದಾಯವನ್ನು 2024–25ನೇ ಸಾಲಿನಲ್ಲಿ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.
ಖರ್ಚು ವಿಭಾಗದಲ್ಲಿ ರಾಜ್ಯಗಳ ಜಿಎಸ್ಟಿ ಪಾಲು ಹಾಗೂ ತೆರಿಗೆಗೆ ಗರಿಷ್ಠ ಶೇ 21ರಷ್ಟು ಖರ್ಚಾಗಲಿದೆ ಹಾಗೂ ಸಾಲ ಮರುಪಾವತಿಗೆ ಶೇ 19ರಷ್ಟು ಖರ್ಚಾಗಲಿದೆ ಎಂದು ಹೇಳಲಾಗಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮ (ರಕ್ಷಣೆ ಹಾಗೂ ಸಬ್ಸಿಡಿ ಹೊರತುಪಡಿಸಿ) ಶೇ 16ರಷ್ಟು ಹಣ ವಿನಿಯೋಗವಾಗಲಿದೆ. ಇತರೆ ಖರ್ಚುಗಳು ಶೇ 9ರಷ್ಟು ಹಾಗೂ ಹಣಕಾಸು ಆಯೋಗಕ್ಕೆ ಶೇ 9ರಷ್ಟು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಶೇ 8ರಷ್ಟು, ಪಿಂಚಣಿಗೆ ಶೇ 4ರಷ್ಟು, ರಕ್ಷಣೆಗೆ ಶೇ 8 ಹಾಗೂ ಸಬ್ಸಿಡಿಗೆ ಶೇ 6ರಷ್ಟು ಹಣವನ್ನು ಖರ್ಚು ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
ರಕ್ಷಣೆಗೆ–4.54 ಲಕ್ಷ ಕೋಟಿ
ಗ್ರಾಮೀಣಾಭಿವೃದ್ಧಿ– 2.65 ಲಕ್ಷ ಕೋಟಿ
ಕೃಷಿ ಹಾಗೂ ಸಂಬಂಧಿತ ಕ್ಷೇತ್ರ– 1.51 ಲಕ್ಷ ಕೋಟಿ
ಗೃಹ ಇಲಾಖೆ–1.50 ಲಕ್ಷ ಕೋಟಿ
ಶಿಕ್ಷಣ–1.25 ಲಕ್ಷ ಕೋಟಿ
ಐಟಿ ಮತ್ತು ದೂರಸಂಪರ್ಕ– 1.16 ಲಕ್ಷ ಕೋಟಿ
ಆರೋಗ್ಯ– 89 ಸಾವಿರ ಕೋಟಿ
ಇಂಧನ– 68 ಸಾವಿರ ಕೋಟಿ
ಸಾಮಾಜ ಕಲ್ಯಾಣ–56 ಸಾವಿರ ಕೋಟಿ
ವಾಣಿಜ್ಯ ಮತ್ತು ಕೈಗಾರಿಕೆ –47 ಸಾವಿರ ಕೋಟಿ
ವಿವಿಧ ಯೋಜನೆಗಳಿಗೆ ಎಷ್ಟು ಹಣ…?
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ–86 ಸಾವಿರ ಕೋಟಿ(ಕಳೆದ ಬಾರಿ 60 ಸಾವಿರ ಕೋಟಿ)
ಸಂಶೋಧನೆ ಮತ್ತು ಅಭಿವೃದ್ಧಿಗೆ– 1,200 ಕೋಟಿ
ಪರಮಾಣು ಇಂಧನ ಕಾರ್ಯಕ್ರಮ– 2,228 ಕೋಟಿ
ಔಷಧ ಕ್ಷೇತ್ರ– 2,143 ಕೋಟಿ,
ಸೆಮಿಕಂಡಕ್ಟರ್ ಹಾಗೂ ಡಿಸ್ಪ್ಲೇ ತಯಾರಿಕಾ ಘಟಕ– 6,903 ಕೋಟಿ
ಸೌರ ವಿದ್ಯುತ್ ಘಟಕ–10 ಸಾವಿರ ಕೋಟಿ
ಎಲ್ಪಿಜಿ ನೇರ ಪಾವತಿ– 1,500 ಕೋಟಿ
ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆ
ಬಜೆಟ್ನಲ್ಲಿ ಪ್ರಮುಖವಾಗಿ ಎನ್ಡಿಎ ಸರ್ಕಾರದ ಪ್ರಮುಖ ಪಕ್ಷಗಳಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳ ಸರ್ಕಾರಗಳಿರುವ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
ಆಂಧ್ರಪ್ರದೇಶಕ್ಕೆ 15 ಸಾವಿರದ ವಿಶೇಷ ಆರ್ಥಿಕ ನೆರವು ಹಾಗೂ ಬಿಹಾರಕ್ಕೆ ಕ್ರೀಡಾ ಮೂಲಸೌಕರ್ಯ, ವೈದ್ಯಕೀಯ ನೆರವು ಹಾಗೂ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ನೆರವು.
ಪೂರ್ವ ರಾಜ್ಯಗಳ ಅಭಿವೃದ್ಧಿಗೆ ಪೂರಕವಾಗಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಇದರಲ್ಲಿ ಪೂರ್ವೋದಯ ಎಂಬ ಯೋಜನೆ ಮೂಲಕ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಆಂಧ್ರಪ್ರದೇಶವನ್ನು ಒಳಗೊಂಡ ಯೋಜನೆಯನ್ನು ಘೋಷಿಸಲಾಗಿದೆ.
ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿ ದರದ ಸಾಲ
ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಶೇ 3ರ ಬಡ್ಡಿ ದರದಂತೆ ಸಾಲ ಸೌಲಭ್ಯ ಘೋಷಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಜನರಿಗೆ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳನ್ನು ಬಜೆಟ್ನಲ್ಲಿ ಉಲ್ಲೇಖಿಸಲಾಗದೆ. ಇದಕ್ಕಾಗಿ ಗರಿಷ್ಠ 7.5 ಲಕ್ಷ ಸಾಲ ನೀಡಲು ಅವಕಾಶವಿದೆ.
ಒಂದು ಸಾವಿರ ಐಟಿಐ ಅಭ್ಯರ್ಥಿಗಳಿಗೆ ಹಬ್ ಅಂಡ್ ಸ್ಪೋಕ್ ಮಾದರಿಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಯೋಜನೆಗಳಿಗೆ 10 ಲಕ್ಷವರೆಗೆ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದೆ.
ಉದ್ಯೋಗ ಹಾಗೂ ಕೌಶಲ
ಒಟ್ಟು ದೇಶದ 4.1 ಕೋಟಿ ಯುವಕರಿಗೆ 2 ಲಕ್ಷ ಕೋಟಿ ಮೊತ್ತದ ಐದು ಸಮಗ್ರ ಇಂಟರ್ನ್ಶಿಪ್ ಯೋಜನೆಯನ್ನು ಘೋಷಿಸಲಾಗಿದೆ. ಇದರ ಮೊದಲ ಚರಣದಲ್ಲಿ 1 ಕೋಟಿ ಯುವಕರಿಗೆ ಮುಂಚೂಣಿಯ ಕಂಪನಿಗಳಲ್ಲಿ ಇಂಟರ್ನ್ಶಿಪ್ಗೆ ಅವಕಾಶ ಕಲ್ಪಿಸುವುದು, ಮೊದಲ ಬಾರಿಗೆ ನೌಕರಿ ಮಾಡುವವರಿಗೆ ತಿಂಗಳ ವೇತನ ಹಾಗೂ ಮಹಿಳಾ ಕೇಂದ್ರಿತ ಕೌಶಲ ಕಾರ್ಯಕ್ರಮದ ಮೂಲಕ ಮಾನವ ಸಂಪನ್ಮೂಲ ಹೆಚ್ಚಳಕ್ಕೆ ಕ್ರಮ
ಮಧ್ಯಮ, ಸಣ್ಣ ಕೈಗಾರಿಕೆ ಹಾಗೂ ತಯಾರಿಕಾ ಘಟಕಕ್ಕೆ ನೆರವು
ಯಂತ್ರಗಳ ಖರೀದಿಗೆ ಸಾಲ ಸೌಲಭ್ಯ, ತಂತ್ರಜ್ಞಾನ ನೆರವು ಪ್ಯಾಕೇಜ್, ಎಂಎಸ್ಎಂಇ ಕೈಗಾರಿಕಾ ಗುಚ್ಛಕ್ಕೆ ಎಸ್ಐಡಿಬಿಐನ 24 ಹೊಸ ಶಾಖೆಗಳನ್ನು ತೆರೆಯಲು ಬಜೆಟ್ನಲ್ಲಿ ಹೇಳಲಾಗಿದೆ.
ಆರ್ಥಿಕ ಅಭಿವೃದ್ಧಿ
ಮುದ್ರಾ ಯೋಜನೆಯ ಮಿತಿಯನ್ನು 10ಲಕ್ಷದಿಂದ 20ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
2.66 ಲಕ್ಷ ಕೋಟಿ ಅನುದಾನವನ್ನು ಗ್ರಾಮೀಣಾಭಿವೃದ್ಧಿಗೆ ಮೀಸಲಿಟ್ಟಿದೆ. ಉತ್ಪಾದನೆ ಹೆಚ್ಚಳ ಹಾಗೂ ಹವಾಮಾನ ಆಧಾರಿತ ತಳಿ ಅಭಿವೃದ್ಧಿ ಕ್ಷೇತ್ರದಲ್ಲಿ ಕೃಷಿ ಸಂಶೋಧನೆಗೆ ಒತ್ತು. ನೈಸರ್ಗಿಕ ಕೃಷಿ ಅನುಸರಿಸುವ 1 ಕೋಟಿ ಕೃಷಿ ಕುಟುಂಬಗಳಿಗೆ 2 ವರ್ಷಗಳ ನೆರವು.