ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅವರು ಸತತವಾಗಿ ಮಂಡಿಸಿರುವ ಏಳನೇ ಬಜೆಟ್ ಇದಾಗಿದೆ. 2024ರ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಸೇರಿ ನಿರ್ಮಲಾ ಅವರು ಈವರೆಗೆ 6 ಬಾರಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆಯ ಒಂದು ದಿನದ ಮೊದಲು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯ ವರದಿಯನ್ನು
ಮಂಡಿಸಲಾಗಿತ್ತು. ಬಜೆಟ್ ಘೋಷಣೆಯ ಮುಖ್ಯಾಂಶಗಳು ಇಲ್ಲಿದೆ.
ಚಿನ್ನ ಬೆಳ್ಳಿ ಮೇಲೆ ಶೇ.6, ಪ್ಲಾಟಿನಂ ಮೇಲೆ ಶೇ.6.5 ಸುಂಕ ಕಡಿತ, ತಾಮ್ರದ ಮೇಲೂ ತೆರಿಗೆ ಕಡಿತ. ಆದಾಯ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ
ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ. ಮೊಬೈಲ್, ಚಾರ್ಜರ್ ಗಳ ಬೆಲೆ ಇಳಿಕೆ.
20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ (ಕ್ಯಾನ್ಸರ್ ಮೂರು ಔಷಧಗಳಿಗೆ ಕಸ್ಟಂ ಸುಂಕದಿಂದ ರಿಯಾಯಿತಿ, ಎಕ್ಸ್ ರೇ ಟ್ಯೂಬ್, ಮೊಬೈಲ್ ಫೋನ್, ರಿಲೇಟೆಡ್ ಪ್ರಾಡಕ್ಟ್ಸ್ ಇಳಿಕೆ,
ವಿದೇಶಿ ಬಟ್ಟೆ ದರ ಅಗ್ಗ, ತೆರಿಗೆ ಕಡಿತ.ಇಕಾಮರ್ಸ್ ಮೇಲಿನ ಟಿಡಿಎಸ್ ಶೇ 1ರಿಂದ ಶೇ 0,1ಕ್ಕೆ ಇಳಿಕೆ
ಸ್ಟಾರ್ಟ್ಅಪ್ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್ ರದ್ದು
ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ
ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ, ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ
ಈ ಬಾರಿ ಬಜೆಟ್ನಲ್ಲಿ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಯೋಜನೆಗಳು ಉದ್ಯೋಗಿಗಳ ಭವಿಷ್ಯ ನಿಧಿಗಳಲ್ಲಿ (ಇಪಿಎಫ್ಒ) ನೋಂದಣಿಯ ಆಧಾರದಲ್ಲಿ ಇರಲಿದೆ.ಎಲ್ಲಾ ವಲಯಗಳಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಒಂದು ತಿಂಗಳ ವೇತನ ನೀಡಲಾಗುವುದು.
ಉದ್ಯೋಗಿಗಳ ಉದ್ಯೋಗಕ್ಕೆ ಸಂಬಂಧಿಸಿದ ಉತ್ಪಾದನಾ ವಲಯಕ್ಕೆ ಹೆಚ್ಚುವರಿ ಉತ್ತೇಜನ ನೀಡುವುದು.
ಈ ಯೋಜನೆಯು 30 ಲಕ್ಷ ಯುವಕರಿಗೆ ಮತ್ತು ಅವರ ಉದ್ಯೋಗದಾತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗಾವಕಾಶವನ್ನು ಕಲ್ಪಿಸುವುದು.
ಇನ್ನು ಮಹಿಳೆಯರನ್ನು ಉದ್ಯೋಗ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವಂತೆ ಮಾಡಲು ವಿಶೇಷ ವಸತಿ ಸೌಲಭ್ಯವನ್ನು ಒದಗಿಸಲಾಗಿವುದು ಎಂದರು.
ಹೊಸ ತೆರಿಗೆ ಪದ್ಧತಿಯಲ್ಲಿ 3ಲಕ್ಷ ಆದಾಯವರೆಗೆ ಶೂನ್ಯ ತೆರಿಗೆಯನ್ನು ಘೋಷಿಸಿದ್ದಾರೆ. ಹಳೇ ತೆರಿಗೆ ಪದ್ಧತಿಯಲ್ಲಿ ಶೇ 5ರಷ್ಟು ತೆರಿಗೆಯ ಮಿತಿಯು 2.5ಲಕ್ಷದಿಂದ 3ಲಕ್ಷವರೆಗಿನ ಆದಾಯಕ್ಕೆ ಇದ್ದು, ಅದು ಹಾಗೇ ಮುಂದುವರಿದಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರಿಗೆ ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರದಿಂದ 75 ಸಾವಿರವರೆಗೆ ಹಾಗೂ ಪಿಂಚಣಿದಾರರಿಗೆ 15ರಿಂದ 20ಸಾವಿರಕ್ಕೆ ಹೆಚ್ಚಿಸಲಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ
3ಲಕ್ಷದಿಂದ 7ಲಕ್ಷವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ,
7ಲಕ್ಷದಿಂದ 10ಲಕ್ಷವರೆಗಿನ ಆದಾಯಕ್ಕೆ ಶೇ 10ರಷ್ಟು,
10ಲಕ್ಷದಿಂದ 12ಲಕ್ಷವರೆಗೆ ಶೇ 15ರಷ್ಟು ತೆರಿಗೆ
12ಲಕ್ಷದಿಂದ 15ಲಕ್ಷವರೆಗೆ ಶೇ 20ರಷ್ಟು
15 ಲಕ್ಷ ಮೇಲಿನ ಆದಾಯಕ್ಕೆ ಶೇ 30ರಷ್ಟು ತೆರಿಗೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಹೊಸ ತೆರಿಗೆ ಪದ್ಧತಿಯಿಂದ ಪ್ರತಿಯೊಬ್ಬ ವೇತನದಾರರಿಗೆ ಕನಿಷ್ಠ 17,500 ಉಳಿತಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೊಷಿಸಿದರು.
ಇದರಲ್ಲಿ ರಾಜ್ಯಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಘೋಷಿಸಿದರು. ಇದರಿಂದ ನಗರಾಭಿವೃದ್ಧಿಗೆ ಅಗತ್ಯವಿರುವ ಡಿಜಿಟಲೀಕರಣ ಮತ್ತು ಭೂ ದಾಖಲೆಗಳಿಗೆ ಭೂ ಆಧಾರ್ ಅಳವಡಿಕೆಗೆ ಒತ್ತು ನೀಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಮೀನುಗಳಿಗೆ ಯುಎಲ್–ಪಿನ್ ಯೋಜನೆಗೆ ಆಧಾರ್ ಜೋಡಣೆ, ಸರ್ವೆ ಸಬ್ ಡಿವಿಷನ್, ಲ್ಯಾಂಡ್ ರಿಜಿಸ್ಟ್ರಿ ಮತ್ತು ಫಾರ್ಮ್ ರಿಜಿಸ್ಟ್ರಿಯನ್ನು ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಸಾಲ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ.
ಆರ್ಥಿಕತೆಯಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು 2024-25ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂಬತ್ತು ಆದ್ಯತೆ ಕ್ಷೇತ್ರಗಳನ್ನು ಘೋಷಿಸಿದ್ದಾರೆ.
9 ಆದ್ಯತೆ ಕ್ಷೇತ್ರಗಳಲ್ಲಿ ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ,ನಾವೀನ್ಯತೆ ಮತ್ತು ಸುಧಾರಣೆಗಳು ಸೇರಿವೆ.
ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ವಿಸ್ತರಣೆ ಮಾಡಲಾಗುವುದು.
ಈ ಬಾರಿಯ ಬಜೆಟ್ನಲ್ಲಿ
ಕೃಷಿ ಕ್ಷೇತ್ರಕ್ಕೆ ಬಂಪರ್ ಗಿಫ್ಟ್ ಘೋಷಣೆ ಮಾಡಿದೆ.
ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ 1.52 ಲಕ್ಷ ಕೋಟಿ ರೂ. ಘೋಷಣೆ ಮಾಡಲಾಗಿದೆ. ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಕೃಷಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾನನ್ ತಿಳಿಸಿದ್ದಾರೆ.