ಉಬರಡ್ಕ:ಉಬರಡ್ಕಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಧಿಕಾರ ಪಡೆದಿದೆ.12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸಾಮಾನ್ಯ ಕ್ಷೇತ್ರದಲ್ಲಿ ಸಹಕಾರ ಭಾರತಿಯ
ರಾಜೇಶ್ ಭಟ್ ನೆಕ್ಕಿಲ, ಹರಿಪ್ರಸಾದ್ ಪಾನತ್ತಿಲ, ಪ್ರಭಾಕರ ಅಮೈ ಗೆಲುವು ಸಾಧಿಸಿದರೆ, ಸಹಕಾರ ಬಳಗದ ಸುರೇಶ್ ಎಂ.ಎಚ್ ಹಾಗೂ ಗಂಗಾಧರ ಕೆ. ಗೆಲುವು ಸಾಧಿಸಿದರು.
ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರ ಬಳಗದ ಪಿ.ಎಸ್.ಗಂಗಾಧರ ಗೆಲುವು ಸಾಧಿಸಿದ್ದಾರೆ.
ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಸಹಕಾರ ಭಾರತಿಯ ವಿಜಯಕುಮಾರ್, ಮಹಿಳಾ ಮೀಸಲು ಕ್ಷೇತ್ರದಲ್ಲಿ ವನಿತಾ, ಕೀರ್ತಿ ಬಿ.ಕೆ., ಪ.ಜಾತಿ ಮೀಸಲು ಸ್ಥಾನದಲ್ಲಿ ಈಶ್ವರ್ ಆರ್, ಪ.ಪಂಗಡದಲ್ಲಿ ಪದ್ಮಯ್ಯ ನಾಯ್ಕ ಚೆನ್ನಡ್ಕ, ಸಾಲಗಾರರಲ್ಲದ ಮೀಸಲು ಕ್ಷೇತ್ರದಿಂದ ಹರೀಶ್ ಮಾಣಿಬೆಟ್ಟು ಗೆಲುವು ಸಾಧಿಸಿದ್ದಾರೆ.
ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಪರಾಭವಗೊಂಡಿದ್ದಾರೆ.







