ಬುಲಾವಯೊ (ಜಿಂಬಾಬ್ವೆ): ಮಧ್ಯಮ ವೇಗದ ಬೌಲರ್ ಹೆನಿಲ್ ಪಟೇಲ್ ಅವರ ಅಮೋಘ ದಾಳಿಯ ನೆರವಿನಿಂದ ಭಾರತ ತಂಡ, ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುರುವಾರ ಅಮೆರಿಕ ತಂಡದ ಮೇಲೆ ಡಿಎಲ್ಎಸ್ ಆಧಾರದಲ್ಲಿ ಆರು ವಿಕೆಟ್ಗಳ ಜಯಪಡೆಯಿತು. ಐದು ವಿಕೆಟ್ ಪಡೆದ ಹೆನಿಲ್ ಅಮೆರಿಕದ
ಕುಸಿತಕ್ಕೆ ಪ್ರಮುಖ ಕಾರಣರಾದರು. ಅಮೆರಿಕ 35.2 ಓವರುಗಳಲ್ಲಿ ಕೇವಲ 107 ರನ್ಗಳಿಗೆ ಉರುಳಿತು. ಎರಡು ಬಾರಿ ಮಳೆಯ ವಿರಾಮ ಕಂಡ ‘ಬಿ’ ಗುಂಪಿನ ಈ ಪಂದ್ಯದಲ್ಲಿ ಭಾರತದ ಗೆಲುವಿನ ಗುರಿಯನ್ನು 37 ಓವರುಗಳಲ್ಲಿ 96 ರನ್ಗಳಿಗೆ ಪರಿಷ್ಕರಿಸಲಾಯಿತು.
ಭಾರತ ತಂಡ 4 ಓವರುಗಳಲ್ಲಿ 1 ವಿಕೆಟ್ಗೆ 21 ರನ್ ಗಳಿಸಿದ್ದಾಗ ಮಳೆ ಶುರುವಾಯಿತು. ಪಂದ್ಯ ಪುನರಾರಂಭದ ನಂತರ ಅಭಿಜ್ಞಾನ್ ಕುಂಡು ಅವರ ಅಜೇಯ 42 ರನ್ಗಳ (41 ಎಸೆತ) ನೆರವಿನಿಂದ ಭಾರತ 4 ವಿಕೆಟ್ಗೆ 99 ರನ್ ಬಾರಿಸಿ ಗೆಲುವು ಪೂರೈಸಿತು. ಉಪನಾಯಕ ವಿಹಾನ್ ಮಲ್ಹೋತ್ರಾ (18) ಮತ್ತು ಅಭಿಜ್ಞಾನ್ ನಾಲ್ಕನೇ ವಿಕೆಟ್ಗೆ 45 ರನ್ ಸೇರಿಸಿದರು.‘ಬಿ’ ಗುಂಪಿನಲ್ಲಿ ಭಾರತ, ಅಮೆರಿಕ ತಂಡಗಳ ಜೊತೆ ಬಾಂಗ್ಲಾದೇಶ ಮತ್ತ ನ್ಯೂಜಿಲೆಂಡ್ ತಂಡಗಳಿವೆ.
ಸಂಕ್ಷಿಪ್ತ ಸ್ಕೋರು:
ಅಮೆರಿಕ: 35.2 ಓವರುಗಳಲ್ಲಿ 107 (ನಿತೀಶ್ ಸುದಿನಿ 36; ಹೆನಿಲ್ ಪಟೇಲ್ 16ಕ್ಕೆ5);
ಭಾರತ: 17.2 ಓವರುಗಳಲ್ಲಿ 4 ವಿಕೆಟ್ಗೆ 99 (ಅಭಿಜ್ಞಾನ್ ಕುಂಡು ಔಟಾಗದೇ 42; ರಿತ್ವಿಕ್ ಅಪ್ಪಿಡಿ 24ಕ್ಕೆ2).












