ಸುಳ್ಯ: ಕಡು ಬೇಸಿಗೆಯಲ್ಲಿ, ಉರಿ ಬಿಸಿಲಿಗೆ ಸುಳ್ಯ ನಗರದಲ್ಲಿ ಹಸಿರು ಸೂಸಿ ನೂರಾರು ಮಂದಿಗೆ ನೆರಳಿನ ತಂಪೆರೆಯುತ್ತಿದ್ದ ಮರಗಳಿಗೆ ಯಾರೋ ಕೊಡಲಿಯಿಟ್ಟ ಹೃದಯ ವಿದ್ರಾಹಕ ಘಟನೆ ನಡೆದಿದೆ.ಒಂದಲ್ಲ, ಎರಡಲ್ಲ ಚೆನ್ನಾಗಿ ಬೆಳೆದ ನಾಲ್ಕು ಮರಗಳು ಈ ಕೃತ್ಯದಿಂದ ನಾಶವಾಗಿದೆ. ಸುಳ್ಯ ನಗರದ ಬಾಳೆಮಕ್ಕಿ ಬಳಿ ನೆರಳು ನೀಡುತ್ತಿದ್ದ
ಮರಗಳು ಈ ಕೃತ್ಯಕ್ಕೆ ಬಲಿಯಾಗಿದೆ. ಅಲ್ಲಿದ್ದ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಇರುವ ಚಾಲಕರಿಗೆ, ಸಾರ್ವಜನಿಕರಿಗೆ, ಪರಿಸಕ್ಕೆ ನೆರಳಾಗಿದ್ದ ಎರಡು ಹೊಂಗೆ ಹಾಗೂ ಎರಡು ಬಾದಾಮಿ ಮರಗಳು ಇದೀಗ ಧರಾಶಾಯಿಯಾಗಿದೆ.
ನಾಲ್ಕು ಮರಗಳನ್ನು ಗರಗಸ ಬಳಸಿ ಅರ್ಧಕ್ಕಿಂತ ಹೆಚ್ಚು ಭಾಗ ತುಂಡರಿಸಿ ಅದು ಯಾರಿಗೂ ಗಿತ್ತಾಗದಂತೆ ಆ ಭಾಗಕ್ಕೆ ಬಟ್ಟೆ ಕಟ್ಟಲಾಗಿತ್ತು. ಗಾಳಿ ಮಳೆಗೆ
ಇದರಲ್ಲಿ 2 ಮರಗಳು ಮುರಿದು ಬಿದ್ದಿದೆ. ಒಂದು ಮರ ಪಾರ್ಕಿಂನಲ್ಲಿ ನಿಲ್ಲಿಸಿದ್ದ ಜೀಪೊಂದರ ಮೇಲೆ ಬಿದ್ದಿದೆ.
ಮರಗಳು ಧರಾಶಾಯಿಯಾದ ಸಂದರ್ಭ ಪರಿಶೀಲಿಸಿದಾಗ ಮರಗಳನ್ನು ತುಂಡರಿಸಿ ಬಟ್ಟೆ ಕಟ್ಟಿರುವುದು ಗಮನಕ್ಕೆ ಬಂದಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.