ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ
ಪರಿವಾರಕಾನ ಬಳಿ ರಸ್ತೆಗೆ ಮರವೊಂದು ಮುರಿದು ಬಿದ್ದು ರಸ್ತೆ ಬಂದ್ ಆಗಿರುವ ಘಟನೆ ನಡೆದಿದೆ. ಸುಳ್ಯ ಪರಿವಾರಕಾನದ
ಉಡುಪಿ ಹೋಟೆಲ್ ಬಳಿ ಮರ ಧರಾಶಾಯಿಯಾಗಿದ್ದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಎರಡೂ ಬದಿಯಲ್ಲಿ ವಾಹನಗಳ ಉದ್ದ ಸಾಲು ಕಂಡು ಬಂದಿದೆ.ಮರ ಬಿದ್ದ ಕಾರಣ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.ಮರ ತೆರವು ಕಾರ್ಯಾಚರಣೆ ನಡೆಸಲಾಗುತಿದೆ ಎಂದು ತಿಳಿದು ಬಂದಿದೆ