ಸುಳ್ಯ: ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಡವರ ಮತ್ತು ಜನ ಸಾಮಾನ್ಯರ ಗೆಲುವು ಎಂದು
ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಕಾಂಗ್ರೆಸ್ನ ಜನಪರವಾದ ಮತ್ತು ಅಭಿವೃದ್ಧಿ ಪರ ಪ್ರಣಾಳಿಕೆಗೆ ಮತ್ತು ಚಿಂತನೆಗಳಿಗೆ ಜನ ಸಾಮಾನ್ಯರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ನೀಡಿದ ಎಲ್ಲಾ ಭರವಸೆಗಳನ್ನೂ ಸರಕಾರ ಈಡೇರಿಸಲಿದೆ ಎಂದು ಅವರು ಹೇಳಿದ್ದಾರೆ.