ಕನಕಮಜಲು:ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದ ಇಬ್ಬರನ್ನು ಊರವರು ಹಿಡಿದು, ವಿಚಾರಿಸಿ ಪೋಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ.ಕನಕಮಜಲಿನ ಅಂಗಡಿಯ ಒಳಗಿನಿಂದ ಬೆಳಗ್ಗಿನ ಜಾವ 3.30ರ ವೇಳೆಗೆ ಶಬ್ದ ಕೇಳಿ ಕಟ್ಟಡದ
ಮಾಲಿಕರ ಮನೆಯವರು ಎಚ್ಚರಗೊಂಡು ನೋಡಿದಾಗ ಅಂಗಡಿಯ ಎದುರಿನಲ್ಲಿ ಕಾರೊಂದು ನಿಲ್ಲಿಸಿತ್ತು, ಅಂಗಡಿಯ ಒಳಗೆ ಶಬ್ದ ಕೇಳುತ್ತಿತ್ತು ಮತ್ತು ಅಂಗಡಿಯ ಶೆಟರ್ ಒಡೆದ ರೀತಿಯಲ್ಲಿತ್ತು. ಅವರು ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದರು. ಸ್ಥಳೀಯರು ಸೇರಿ
ಕಳವು ನಡೆಸುತ್ತಿದ್ದ ಕಳ್ಳರನ್ನು ಹಿಡಿದು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿದರು ಎಂದು ತಿಳಿದು ಬಂದಿದೆ. ಕಳವು ನಡೆಸುತ್ತಿದ್ದವರು
ಬಂಟ್ವಾಳ ಮೂಲದವರು ಎಂದು ಹೇಳಲಾಗಿದೆ.