ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಅಂತಿಮ ದಿನವಾದ ಇಂದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಭಾರತ ತಂಡದ ಆಟಗಾರ್ತಿಯರು ಐತಿಹಾಸಿಕ ಜಯ ದಾಖಲಿಸಿದರು. ಶನಿವಾರದ ದಿನದಾಟದ ಅಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ
5 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು 28 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ ಕಳೆದುಕೊಂಡಿತು. ಕೇವಲ 75 ರನ್ ಗುರಿ ಪಡೆದ ಭಾರತ ತಂಡವು ನಿರಾಯಾಸವಾಗಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಸೇರಿಸಿದ ಸ್ಮೃತಿ ಮಂದಾನ (ಔಟಾಗದೆ 38 ರನ್) ಮತ್ತು ಜೆಮಿಮಾ ರಾಡ್ರಿಗಸ್ (ಔಟಾಗದೆ 12 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಇಂಗ್ಲೆಂಡ್ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಜಯ ಭಾರತ ಜಯ ಗಳಿಸಿತ್ತು.
ಅಂತಿಮ ದಿನದಾಟದಲ್ಲಿ ಭಾರತದ ಸ್ಪಿನ್ನರ್ಗಳಾದ ಸ್ನೇಹ ರಾಣಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡಿದರು.
ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 77.4 ಓವರ್ಗಳಲ್ಲಿ 219. ಭಾರತ: 126.3 ಓವರ್ಗಳಲ್ಲಿ 406.
ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 105.4 ಓವರ್ಗಳಲ್ಲಿ 261, ಭಾರತ 18.4 ಓವರ್ಗಳಲ್ಲಿ 75/3












